ನಟ ದರ್ಶನ್’ ಎಲ್ಲಾ ಸಿನಿಮಾ ಬ್ಯಾನ್ ಮಾಡಿ: ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹ

ದಾವಣಗೆರೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಹತ್ಯೆಗೆ ನ್ಯಾಯ ದೊರೆಯಬೇಕು ಅಂತ ಆದ್ರೇ, ಅದು ನಟ ದರ್ಶನ್ ಕನ್ನಡ ಚಿತ್ರರಂಗಳನ್ನು ಬ್ಯಾನ್ ಮಾಡಿದಾಗ ಮಾತ್ರವೇ ಆಗಿದೆ. ಅಲ್ಲದೇ ನಟ ದರ್ಶನ್ ಅವರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧ ಮಾಡಬೇಕು ಎಂಬುದಾಗಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹತ್ಯೆಗೀಡಾದಂತ ದರ್ಶನ್ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಈ ನೆಲದ ಕಾನೂನಿಡಿ ಆರೋಪಿಯಾಗಿರುವಂತ ನಟ ದರ್ಶನ್ ಗೆ ಶಿಕ್ಷೆಯಾಗಬೇಕು ಎಂದರು.

ನಟ ದರ್ಶನ್ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು. ಸಿಟ್ಟು ಬಂದಿದ್ದರೇ ಎರಡು ಹೊಡೆದಿದ್ದರೇ ಆಗಿತ್ತು. ಅದರ ಬದಲಿಗೆ ಹೀಗೆ ಹತ್ಯೆ ಮಾಡಿದ್ದು ಕ್ರೂರತನವಾಗಿದೆ. ಇಂತಹ ನಟ ದರ್ಶನ್ ತಪ್ಪು ಮಾಡಿದ್ರೇ ಸೂಕ್ತ ಕಾನೂನು ಕ್ರಮ ಆಗಲಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಬಗ್ಗೆ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ದೂರು ನೀಡಿದ ಆಕೆಯ ಸಹೋದರ ಅವರ ಜೊತೆ ಇರಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಆಕೆಯ ಸಹೋದರನಿಗೆ ಅಮಿಷ ಒಡ್ಡಿ ದೂರು ದಾಖಲು ಮಾಡಿಸಿದ್ದಾರೆ. ಯಡಿಯೂರಪ್ಪನವರು ತಲೆಮರೆಸಿಕೊಂಡಿಲ್ಲ. ಜೂನ್.17 ಕ್ಕೆ ಸಿಐಡಿ ಮುಂದೆ ಹಾಜರಾಗುತ್ತಾರೆ ಎಂದು ಹೇಳಿದರು.

Latest Indian news

Popular Stories