ಬೆಂಗಳೂರಿನ ಎಲೆಕ್ಟ್ರಿಕ್‌ ಗಾಡಿ ಶೋರೂಂಗೆ ಬೆಂಕಿ : ಯುವತಿ ಸಜೀವ ದಹನ!-

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಶೋರೂಂನೊಳಗಿದ್ದ ಯುವತಿ ಸಜೀವ ದಹನವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಲ್ಲಿನ ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯ ನವರಂಗ್‌ ಬಾರ್‌ ಬಳಿಯ ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ನೋಡನೋಡುತ್ತಲೇ ಇಡೀ ಶೋರೂಂ ಹೊತ್ತಿ ಉರಿದಿದೆ.

ಈ ವೇಳೆ ಶೋರೂಂನೊಳಗಿದ್ದ ಸೇಲ್ಸ್ ಎಕ್ಸಿಕ್ಯುಟಿವ್‌ ಕೆಲಸ ಮಾಡುತ್ತಿದ್ದ ಯುವತಿ ಬೆಂಕಿಗಾಹುತಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ . ಘಟನೆಗೆ ಶಾರ್ಟ್ ಸರ್ಕ್ಯೂಟ್‌ ಕಾರಣವಿರಬಹುದು ಎಂದು ಶಂಕಿಸಲಾಗಿದೆ

Latest Indian news

Popular Stories