ಪ್ರಹ್ಲಾದ್ ಜೋಶಿಗೆ ಟಿಕೆಟ್ ಘೋಷಣೆ, ಜಗದೀಶ್ ಶೆಟ್ಟರ್‌ಗೆ ಹಿನ್ನಡೆ

ಬೆಂಗಳೂರು ಮಾರ್ಚ್ 13: ಕರ್ನಾಟಕ ಲೋಕಸಭಾ ಚುನಾವಣೆಯ ಎಲ್ಲ ಕ್ಷೇತ್ರಗಳ ಪೈಕಿ ಧಾರವಾಡ ಕ್ಷೇತ್ರವು ಹೆಚ್ಚು ಗಮನ ಸೆಳೆದಿತ್ತು. ಹಲವು ಸಭೆಗಳ ಬಳಿಕ ಬಿಜೆಪಿಯು ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದ್ದಾರೆ.

ಇದರಲ್ಲಿ ಧಾರವಾಡದ ಟಿಕೆಟ್ ಅನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಘೋಷಿಸಲಾಗಿದೆ.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಭಾರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಬಿಜೆಪಿಯ ನಿರ್ಧಾರ ಆಘಾತ ನೀಡಿದೆ. ಧಾರವಾಡ ಜೊತೆಗೆ ಜಗದೀಶ್ ಶೆಟ್ಟರ್ ಹಾವೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಸದರಿ ಪಟ್ಟಿಯಲ್ಲಿ ಹಾವೇರಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಮತ್ತು ಧಾರವಾಡ ಎರಡು ಕ್ಷೇತ್ರಗಳು ಕನಸಾಗಿಯೇ ಉಳಿದಿವೆ.

ಬಹುಶಃ ಅವರಿಗೆ ಧಾರವಾಡ ಕ್ಷೇತ್ರ ಟಿಕೆಟ್ ತಮಗೇ ಸಿಗುವುದು ನೂರಕ್ಕೆ ನೂರರಷ್ಟು ಗೊತ್ತಿತ್ತು ಎಂಬುದಕ್ಕೆ ಇಂದಿನ ಬಿಜೆಪಿಯ ಟಿಕೆಟ್ ಫೈನಲ್ ಮಾಡಿರುವ ನಿರ್ಧಾರವೇ ಸಾಕ್ಷಿಯಾಗಿದೆ.ಶೆಟ್ಟರ್ ಹೆಸರು ಮುನ್ನೆಲೆಗೆ: ವಿಚಲಿತರಾಗದ ಜೋಶಿಟಿಕೆಟ್ ವಿಚಾರ ಪ್ರಸ್ತಾಪ ಆದಾಗಿನಿಂದಲೂ ಶೆಟ್ಟರ್ ಹೆಸರು ಮುನ್ನೆಲೆಗೆ ಬರುತ್ತಿತ್ತು. ಧಾರವಾಡ ಈ ಬಾರಿ ಜೋಶಿಯವರಿಗೆ ಸಿಗುವುದಿಲ್ಲ.

ಹಾಲಿ ಸಚಿವರಿಗೆ ಕೊಕ್ ಕೊಡುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂಬೆಲ್ಲ ವದಂತಿಗಳು ಹರಡಿದರೂ ಸಹಿತ ಪ್ರಹ್ಲಾದ್ ಜೋಶಿಯವರು ವಿಚಲಿತರಾಗಲಿಲ್ಲ. ಬಹುಶಃ ಅವರಿಗೆ ಧಾರವಾಡ ಕ್ಷೇತ್ರ ಟಿಕೆಟ್ ತಮಗೇ ಸಿಗುವುದು ನೂರಕ್ಕೆ ನೂರರಷ್ಟು ಗೊತ್ತಿತ್ತು ಎಂಬುದಕ್ಕೆ ಇಂದಿನ ಬಿಜೆಪಿಯ ಟಿಕೆಟ್ ಫೈನಲ್ ಮಾಡಿರುವ ನಿರ್ಧಾರವೇ ಸಾಕ್ಷಿಯಾಗಿದೆ.ಬಿಜೆಪಿ ವಿಧಾನಸಭಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳಿದ್ದರು.

Latest Indian news

Popular Stories