ಬನ್ನೇರ್‌ಘಟ್ಟ : ಶಾಲೆಯಲ್ಲಿ ನೀರಿಲ್ಲದ ಕಾರಣ ರಜೆ ಘೋಷಣೆ

ಬನ್ನೇರ್‌ಘಟ್ಟ ಮಾರ್ಚ್.7:ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.ಆದರೀಗ ಈ ಸಮಸ್ಯೆ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೂ ಸಹ ಹರಡಿದೆ. ಹೀಗೆ ನೀರಿಲ್ಲ ಎಂಬ ಕಾರಣಕ್ಕೆ ಶಾಲೆಯನ್ನೇ ಮಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೌದು.

ನೀರಿನ ಸಮಸ್ಯೆಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಶಾಲೆವೊಂದು ಮಂಗಳವಾರದಿಂದ ಮುಚ್ಚಿದೆ. ಸುಮಾರು 100 ವಿದ್ಯಾರ್ಥಿಗಳಿರುವ ಖಾಸಗಿ ಶಾಲೆಯ ಅಭಿಕ್ ಅಕಾಡೆಮಿಯ ಆಡಳಿತ ಮಂಡಳಿಯು ಶಾಲೆಯಲ್ಲಿ ನೀರಿನ ಕೊರತೆಯ ಕಾರಣ ಮಾರ್ಚ್ 5 ರಿಂದ 10 ರವರೆಗೆ ರಜೆ ಘೋಷಿಸಿದೆ. ‘ಶಾಲೆಯ ದೈನಂದಿನ ಬಳಕೆಗೆ ನಾವು ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದೇವೆ. ಆದರೆ ಈಗ ಆ ನೀರು ಸಂಪೂರ್ಣ ಬತ್ತಿ ಹೋಗಿದೆ.

ಟ್ಯಾಂಕರ್‌ಗಳಿಂದ ನೀರು ಖರೀದಿಸಲು ನಾವು ಸಿದ್ಧರಿದ್ದೇವೆ. ಆದರೆ ಹೆಚ್ಚಿನ ಬೆಲೆಗೆ ನಾವು ಅದನ್ನು ಖರೀದಿಸಲು ಸಿದ್ಧರಿಲ್ಲ. ಆದ್ದರಿಂದ ನಾವು ನೀರಿನ ವ್ಯವಸ್ಥೆ ಮಾಡುವವರೆಗೂ ಶಾಲೆಯನ್ನು ಒಂದು ವಾರ ಮುಚ್ಚಿದ್ದೇವೆ. ಇದರ ಹೊರತುಪಡಿಸಿ ಬೇರೆ ದಾರಿಯಿಲ್ಲ’ ಎಂದು ಶಾಲೆಯ ಸಿಬ್ಬಂದಿಯೊಬ್ಬರು ಹೇಳಿದರು. ನೀರಿಗೆ ಸಮಸ್ಯೆಯೇ?

ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕರ್ ಬುಕ್ ಮಾಡಿ, ಮಾಹಿತಿ ಇಲ್ಲಿದೆಹೊಸಕೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ತಿಂಗಳಿಂದ ನೀರಿನ ಸಮಸ್ಯೆ ಆರಂಭವಾಗಿದೆ. “ಶಾಲೆಯಲ್ಲಿ ಪ್ರತ್ಯೇಕ ಬೋರ್‌ವೆಲ್ ಇದೆ. ಆದರೆ ಅದು 2023ರ ಆಗಸ್ಟ್‌ನಲ್ಲಿ ಬತ್ತಿಹೋಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅದನ್ನು ಪುನಃ ಕೊರೆಸಿದೆ.

ಆದರೆ ಅದು ಒಂದು ತಿಂಗಳಲ್ಲಿ ಬತ್ತಿಹೋಗಿದೆ. ಅಂದಿನಿಂದ ನಾವೇ ಟ್ಯಾಂಕರ್ ನೀರು ಖರೀದಿಸುತ್ತಿದ್ದೇವೆ. ಆದರೆ ಈಗ ಬೆಲೆಗಳು ಹೆಚ್ಚಾದಂತೆ ಅಷ್ಟು ಹಣ ಕೊಟ್ಟು ನೀರನ್ನು ನಾವು ಖರೀದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಇಲ್ಲಿ 350 ವಿದ್ಯಾರ್ಥಿಗಳು ಓದುತ್ತಿದ್ದಾರೆ.

Latest Indian news

Popular Stories