ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಫೆಬ್ರವರಿ 24 ರಂದು ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ 11 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಖೇರ್ಡಾದಿಂದ ಭಂಡಾರಕುಮಟಾವರೆಗೆ 380 ಲಕ್ಷ ಮೊತ್ತದ ರಸ್ತೆ ಕಾಮಗಾರಿ, ಕಮಲನಗರದಿಂದ ಚೊಂಡಿಮುಖೇಡ್‌ವರೆಗೆ 70 ಲಕ್ಷದ ರಸ್ತೆ ಹಾಗೂ ಹೊಳಸಮುದ್ರದಿಂದ ಹುಲಸೂರ್‌ವರೆಗೆ 70 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾಗೆಯೇ ಗೇಮಾ ತಾಂಡಾದಲ್ಲಿ 30 ಲಕ್ಷ, ಅಂಬ್ರು ತಾಂಡಾದಲ್ಲಿ 20 ಲಕ್ಷ, ಚೊಂಡಿಮುಖೇಡ್‌ನಲ್ಲಿ 163 ಲಕ್ಷ, ಪೂಮಾ ತಾಂಡಾದಲ್ಲಿ 38 ಲಕ್ಷ ಹಗೂ ವಾಗನಗೇರಾ ಗ್ರಾಮದಲ್ಲಿ 98 ಲಕ್ಷ, ಬೆಳಕೋಣಿಯಲ್ಲಿ 240 ಲಕ್ಷ ಹಾಗೂ ಪಾಂಡುತಾAಡಾದಲ್ಲಿ 15 ಲಕ್ಷ ಮೊತ್ತದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಜನತೆಗೆ ಅನುಕೂಲವಾಗಲಿ ಎಂಬ ಕಾರಣದಿಂದ ಸರ್ಕಾರಗಳ ಮೇಲೆ ಒತ್ತಡ ಹೇರಿ ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರಣದಿಂದಾಗಿ ಕೆಲವೆಡೆ ಕೆಲಸಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.
ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಇಂಜಿನೀಯರ್‌ಗಳು ಕಛೇರಿಗಳಿಗೆ ಸೀಮಿತರಾಗದೇ ಕಾಮಗಾರಿ ಸ್ಥಳಗಳಿಗೆ ಓಡಾಡಬೇಕು. ತಮ್ಮ ವ್ಯಾಪ್ತಿಯಲ್ಲಿನ ಕೆಲಸಗಳ ಮೇಲೆ ನಿಗಾ ವಹಿಸಬೇಕು. ಕಾಲಕಾಲಕ್ಕೆ ಗುತ್ತಿಗೆದಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಕೆಲಸ ಸರಿಯಾಗಿ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು. ಕಾಮಗಾರಿಗಳು ಕಳಪೆಯಾದಲ್ಲಿ ಯಾರನ್ನೂ ಬಿಡುವುದಿಲ್ಲವೆಂದು ಎಚ್ಚರಿಸಿದರು.