ಬೆಂಗಳೂರಿನಲ್ಲಿ ಪತ್ತೆಯಾಗಿದ್ದ 2 ಕೋಟಿ ಹಣ ನಮ್ಮದೇ ಎಂದ BJP

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾರಿನಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಹಣ ಪತ್ತೆ ಪ್ರಕರಣ ಭಾರಿ ಸುದ್ದಿಯಾಗಿತ್ತು. ಇದೀಗ ರಾಜ್ಯ ಬಿಜೆಪಿ ಈ ಹಣ ನಮ್ಮದೇ ಎಂದು ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಪತ್ತೆಯಾಗಿರುವ 2 ಕೋಟಿ ಹಣ ನಮ್ಮದು ಎಂದು ಬಿಜೆಪಿ ಹಣದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದೆ.

ವಿವಿಧ ಕ್ಷೇತ್ರಗಳ ಚುನಾವಣೆ ಖರ್ಚಿಗೆಂದು ಮಾರ್ಚ್ 27ರಂದು ಮಲ್ಲೇಶ್ವರಂ ನ ಕೋದಂಡರಾಮಪುರದ ಕೆನರಾ ಬ್ಯಾಂಕ್ ನಿಂದ್ ಒಟ್ಟು 5 ಕೋಟಿ ಹಣ ಡ್ರಾ ಮಾಡಲಾಗಿತ್ತು. ಹಣವನ್ನು ಬಿಜೆಪಿ ಕಚೇರಿಯಲ್ಲಿ ಇಡಲಾಗಿತ್ತು ಎಂದು ತಿಳಿಸಿದೆ.

ಅಲ್ಲದೇ ಹಣ ವಿಥ್ ಡ್ರಾ ಮಾಡಿರುವ ಬಗ್ಗೆ ಹಾಗೂ ಕಾರಿನಲ್ಲಿ ಹಣ ತರಲಾಗುತ್ತಿದ್ದ ಬಗ್ಗೆಯೂ ದಾಖಲೆಗಳನ್ನು ಒದಗಿಸಿದೆ. ಸದ್ಯ ಕಾರು ಹಾಗೂ ಹಣ ಕಾಟನ್ ಪೇಟೆ ಪೊಲೀಸರ ವಶದಲ್ಲಿದೆ.

Latest Indian news

Popular Stories