ಬಿಜೆಪಿ 230 ಸೀಟು ಸಹ ಗೆಲ್ಲೊಲ್ಲ; ಜನ ನಮಗೆ ಅಶೀರ್ವಾದ ಮಾಡ್ತಾರೆ: ಪ್ರಿಯಾಂಕ್ ಖರ್ಗೆ

ಕಲಬುರಗಿ (ಜೂ.2): ಎಕ್ಸಿಟ್ ಪೋಲ್‌ಗಳು ಬರ್ತಾವೆ ಹೋಗ್ತಾವೆ. ಕಳೆದ ಬಾರಿ ಯಾರೂ ಕೂಡ ನಾವು ಸ್ಥಾನ ದಾಟುತ್ತೇವೆ ಅಂತಾ ಹೇಳಲಿಲ್ಲ. ಬಹಳಷ್ಟು ಸಮೀಕ್ಷೆಗಳು ಅತಂತ್ರ ಸ್ಥಿತಿ ಅಂತಾನೆ ಹೇಳಿದ್ವು. ಇನ್ನು ಕೆಲವರು ಬಿಜೆಪಿ ಅಧಿಕಾರಕ್ಕೆ ಬರ್ತಾರೆ ಅಂತಾ ಹೇಳಿದ್ರು. ಕೆಲವು ಬಿಜೆಪಿ ನಾಯಕರು ಸೂಟು ಕೂಡ ಹೊಲಿಸಿಕೊಂಡಿದ್ರು.ಆದರೆ ಫಲಿತಾಂಶ ಏನಾಯ್ತು?

ನಮಗೆ 136 ಸ್ಥಾನಗಳಲ್ಲಿ ತಂದು ಕೊಡಲಿಲ್ಲವ? ಅದೇ ರೀತಿ ಇದೂ ಆಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಚುನಾವಣೋತ್ತರ ಸಮೀಕ್ಷೆಗಳನ್ನ ತಿರಸ್ಕರಿಸಿದರು.

ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಟಿವಿ ಎಕ್ಸಿಟ್ ಪೋಲ್‌ಗಿಂತ ಜನರ ಎಕ್ಸಿಟ್‌ ಪೋಲ್ ಇಂಪಾರ್ಟೆಂಟ್. ಹಿಂದಿನ ಚುನಾವಣೆಯಲ್ಲಿ ಎಲ್ಲ ಉಲ್ಟಾ ಆಗಿದೆ. ಇದೀಗ ಅದೇ ರೀತಿ ಆಗಬಹುದು. ಇನ್ನೇನು 48 ಗಂಟೆಯಲ್ಲಿ ಫಲಿತಾಂಶ ಬರುತ್ತೆ. ಈ ಎಕ್ಸಿಟ್ ಪೋಲ್ ಇರಲಿ, ಜನರ ಎಕ್ಸಿಟ್ ಪೋಲ್‌ನಲ್ಲಿ ಏನು ಬರುತ್ತೆ ನೋಡೋಣ. ಕರ್ನಾಟಕದಲ್ಲಿ 18 ಸ್ಥಾನ ಗೆಲ್ಲುತ್ತೆವೆ ಎನ್ನುವ ಸಂಪೂರ್ಣ ವಿಶ್ವಾಸ ನಮಗಿದೆ. ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಅಬ್ ಕಿ ಬಾರ್ 400 ಪರ್ ಅಂತಾ ಹೇಳ್ತಾ ಇದ್ರು. ಅದು ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. 40 ಪಾರ್ ಅಂದ್ರೆ ಸಂವಿಧಾನ ಬದಲಾವಣೆ ಮಾಡ್ತಾರೆ ಅಂತಾ ಜನರಿಗೆ ಗೊತ್ತಾಗಿದೆ ಹಾಗಾಗಿ ಬಿಜೆಪಿಯವರಿಗೆ ಅಧಿಕಾರ ಕೊಡಲ್ಲ. ಈ ಬಾರಿ ಬಿಜೆಪಿ 230 ಸಹ ದಾಟಲ್ಲ. ಜನ ನಮಗೆ ಆಶೀರ್ವಾದ ಮಾಡ್ತಾರೆ ಎನ್ನುವ ನಂಬಿಕೆ ಇದೆ. ಯಾವುದೇ ರೀತಿಯ ಆತಂಕ ಇಲ್ಲ. ಜನರು ಏನೇ ತೀರ್ಪು ಕೊಟ್ಟರೂ ಎಲ್ಲರೂ ತಲೆ ಬಾಗಲೇಬೇಕು ಎಂದರು.

Latest Indian news

Popular Stories