ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್: ಮತ್ತೆ ಸಿಸಿಬಿ ವಿಚಾರಣೆ

ಬೆಂಗಳೂರು, (ಸೆಪ್ಟೆಂಬರ್ 18): MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿ ಅನಾರೋಗ್ಯದ ನಾಟಕವಾಡಿದ್ದ ಚೈತ್ರಾ ಕುಂದಾಪುರ (Chaitra Kundapura) ಆಸ್ಪತ್ರೆಯಿಂದ(Hospital) ಡಿಸ್ಚಾರ್ಜ್ ಆಗಿದ್ದಾಳೆ.

ರೋಗಿಯಂತೆ ಕಳೆದ 3 ದಿನಗಳಿಂದ ನಾಟಕವಾಡುತ್ತಾ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚೈತ್ರಾ ಕುಂದಾಪುರ ಆರೋಗ್ಯವಾಗಿದ್ದಾಳೆ. ಎಲ್ಲಾ ಮೆಡಿಕಲ್​ ರಿಪೋರ್ಟ್​ಗಳಲ್ಲಿ ನಾರ್ಮಲ್​ ಅಂತ ಬಂದಿದೆ. ಹೀಗಾಗಿ ಇಂದು(ಸೆಪ್ಟೆಂಬರ್ 18) ಸಿಸಿಬಿ ಪೊಲೀಸರು (CCB Police), ಚೈತ್ರಾ ಕುಂದಾಪುರಳನ್ನ ವಿಕ್ಟೋರಿಯಾ ಆಸ್ಪತ್ರೆಯಿಂದ(Victoria Hospital) ಡಿಸ್ಚಾರ್ಜ್ ಮಾಡಿಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ.

Latest Indian news

Popular Stories