ಚಾಮರಾಜನಗರ : ರಂಗನಾಥಸ್ವಾಮಿ ದರ್ಶನ ಪಡೆದು ವಾಪಾಸ್ಸಾಗುವಾಗ ಖಾಸಗಿ ಬಸ್‌ ಪಲ್ಟಿ : 26 ಜನರಿಗೆ ಗಾಯ

ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟದ ರಂಗನಾಥಸ್ವಾಮಿ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, 26 ಜನರು ಗಾಯಗೊಂಡಿರುವ ಘಟನೆ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಗವಿ ಬೋರೆ ಬಳಿ ನಡೆದಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಅಗಿನವಾಳು ಹಾಗೂ ಸುತ್ತಮುತ್ತಲ ಗ್ರಾಮಗಳ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್‌ ಆಗುತ್ತಿದ್ದಾಗ ಗವಿಬೋರೆ ಇಳಿಜಾರಿನಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ನಂಜನಗೂಡು ತಾಲ್ಲೂಕಿನ ಬಾಗೂರು, ಮಡನಳ್ಳಿ, ಹೂರಲ್ವಾಡಿ, ತಗಡೂರು ಕೆಬ್ಬೆಪುರ ಸುತ್ತಮುತ್ತಲ 60ಕ್ಕೂ ಹೆಚ್ಚು ಜನರು ಬಸ್‌ನಲ್ಲಿದ್ದರು. ಬಸ್‌ ಉರುಳಿ ಬಿದ್ದ ರಭಸಕ್ಕೆ ಬಹುತೇಕರಿಗೆ ಎದೆ, ಕೈಕಾಲು ಒತ್ತಿಕೊಂಡಂತೆ ಆಗಿದ್ದು, ಆಘಾತದಿಂದ ಅಸ್ವಸ್ಥಗೊಂಡರು.

ಬಸ್ ಗವಿ ಬೋರೆ ಬಳಿ ಬಸ್‌ ಇಳಿಯುತ್ತಿದ್ದಾಗ ಮುಂಭಾಗದಿಂದ ಕಾರು ಬರುವುದನ್ನು ಕಂಡು ಚಾಲಕ ಗಲಿಬಿಲಿಕೊಂಡಿದ್ದ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆಯಿತು. ದೊಡ್ಡ ಮರಗಳಿಗೆ ಸಿಲುಕಿ ಬಸ್ ನಿಂತಿತು. ಇದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಪ್ರಯಾಣಿಕರೊಬ್ಬರೂ ಮಾಹಿತಿ ನೀಡಿದ್ದಾರೆ.

Latest Indian news

Popular Stories