ಕೊಳವೆಬಾವಿ ಕೊರೆಸಿ ಜನ್ಮದಿನ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ.ನೀರಿಗಾಗಿ ಜನ ಪರದಾಡುವಂತಾಗಿದೆ. ಈ ನಡುವೆ ನೀರಿನ ಮಹತ್ವ ಸಾರುವ ಹಾಗೂ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ನೀಡುವ ದೃಷ್ಟಿಯಿಂದ ಕಾಂಗ್ರೆಸ್ ಮುಖಂಡರೊಬ್ಬರು ಕೊಳವೆಬಾವಿ ಕೊರೆಸಿ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ ಹೌದು.

ವಿಜಯನಗರ ವಿಧಾನಸಭಾ ಕ್ಷೇತ್ರದ ದೀಪಾಂಜಲಿ ನಗರ ವಾರ್ಡ್‌ ವ್ಯಾಪ್ತಿಯ ಅವಲಹಳ್ಳಿಯಲ್ಲಿ ಬಿಬಿಎಂಪಿಯ ಮಾಜಿ ಉಪಮೇಯರ್ ಹಾಗೂ ಕಾಂಗ್ರೆಸ್‌ ಮುಖಂಡ ಎಂ ಲಕ್ಷ್ಮೀನಾರಾಯಣ ಹಾಗೂ ಅವರ ಪುತ್ರಿ ಎಲ್‌.ಪವಿತ್ರಾ ಅವರ ಜನ್ಮದಿನದ ಅಂಗವಾಗಿ ಉಚಿತ ಕೊಳವೆ ಬಾವಿ ಕೊರೆಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಯಿತು.

ದೀಪಾಂಜಲಿ ನಗರ ವಾರ್ಡ್‌ ವ್ಯಾಪ್ತಿಯ ಅವಲಹಳ್ಳಿಯಲ್ಲಿ ಕೊಳವೆಬಾವಿ ಕೊರೆಸುವ ಕಾರ್ಯಕ್ಕೆ ಕಾಂಗ್ರೆಸ್‌ ಮುಖಂಡ ಎಂ. ಲಕ್ಷ್ಮೀನಾರಾಯಣ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣ ಅವರು, ಹಿತೈಷಿಗಳು, ಮುಖಂಡರು, ಅಭಿಮಾನಿಗಳೆಲ್ಲ ಸೇರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕೊಳವೆ ಬಾವಿ ಕೊರೆಸಲಾಗಿದೆ.

ಇದರಿಂದ ಅವಲಹಳ್ಳಿಯ ಸುತ್ತಮುತ್ತ ಇರುವ 500 ಮನೆಗಳಿಗೆ ಅನುಕೂಲವಾಗುಷ್ಟು ನೀರು ಲಭ್ಯವಾಗಲಿದೆ ಎಂದು ಹೇಳಿದರು.ಬರಗಾಲದಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ತಾಂಡವಾಡುತ್ತಿರುವುದರಿಂದ ಸಾರ್ವಜನಿಕರಿಗೆ ನೀರು ಪೂರೈಸುವುದು ಒಳ್ಳೆಯ ಕೆಲಸವಾಗಿದ್ದು ಮುಂದಿನ ದಿನಗಳಲ್ಲಿ ಭಗವಂತ ಮತ್ತಷ್ಟು ಶಕ್ತಿ ನೀಡಿದರೆ ಸಾರ್ವಜನಿಕವಾಗಿ ಇನ್ನಷ್ಟು ಸೇವೆ ಮಾಡಲು ಮುಂದಾಗುತ್ತೇವೆ ಎಂದರು.

ಮುಖಂಡರಾದ ಗಿರೀಶ್, ರಮೇಶ್, ಹೇಮಂತ್, ಹನುಮಂತಪ್ಪ, ಚಂದ್ರಪ್ಪ, ಅವಲಹಳ್ಳಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇನ್ನೂ ನೀರಿನ ಸಮಸ್ಯೆಯ ನಡುವೆ ಟ್ಯಾಂಕರ್‌ಗಳ ಹಾವಳಿ ಜೋರಾಗಿದೆ. ಟ್ಯಾಂಕರ್ ನೀರಿಗೆ ಜನ ಹೆಚ್ಚೆಚ್ಚು ಹಣ ಕೊಟ್ಟು ಖರೀದಿ ಮಾಡುವಂತಾಗಿದೆ.ಈ ನುಡವೆ ನೀರಿನ ದಂಧೆ ತಡೆಯಲು ಖಾಸಗಿ ಟ್ಯಾಂಕರ್ ವಶಕ್ಕೆ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.ಕುಡಿಯುವ ನೀರಿನ ಪೂರೈಸಲು ಬೆಂಗಳೂರಿನ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 10 ಕೋಟಿ ನೀಡಲಾಗಿದೆ.

Latest Indian news

Popular Stories