2024 ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ: ಪ್ರಮೋದ್ ಮುತಾಲಿಕ್

ಜಯನಗರ : 2024 ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ ಅಂಥ ಪ್ರಮೋದ್‌ ಮುತಾಲಿಕ್‌ ಅವರು ಹೇಳಿದ್ದಾರೆ.

ಅವರು ಭಾನುವಾರ ನಗರದಲ್ಲಿ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, 2024ರ ನಂತರ ನೂರಕ್ಕೆ ನೂರು ಹಿಂದು ರಾಷ್ಟ್ರವಾಗುತ್ತದೆ.

ಯಾರೂ ದೇಶ ಬಿಟ್ಟು ಹೋಗಬೇಕಾಗಿಲ್ಲ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಂಸ್ಕೃತಿ ಒಪ್ಪಿ ಎಲ್ಲರೂ ಬದುಕು ನಡೆಸಬಹುದು ಅಂತ ಹೇಳಿದರು. ಇನ್ನೂ ಭಯೋತ್ಪಾದಕರನ್ನು ಬಳಸಿ ರಾಜಕಾರಣ ಮಾಡುವ ಕೆಟ್ಟ ಚಾಳಿ ಕಾಂಗ್ರೆಸ್ಸಿಗರಿಗಿದೆ ಎಂದು ಆರೋಪಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ‌ 400 ಸೀಟು ದಾಟುತ್ತಾರೆ. ಮತ್ತೆ ಸರಕಾರ ಬರುವುದರಲ್ಲಿ ಅನುಮಾನವಿಲ್ಲ ಎಂದರು.

Latest Indian news

Popular Stories