ಬೆಂಗಳೂರು: ದಿವಂಗತ ಜಯಲಲಿತಾ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕರ್ನಾಟಕಕ ಜಪ್ತಿ ಮಾಡಿದ್ದಂತ ಒಡವೆಗಳನ್ನು ತಮಿಳುನಾಡಿಗೆ ಹಿಂದಿರುಗಿಸಲು ಕೋರ್ಟ್ ದಿನಾಂಕ ಫಿಕ್ಸ್ ಮಾಡಿದೆ.
ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದಂತ ಮೋಹನ್ ಅವರು, ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಶಪಡಿಸಿಕೊಂಡಿರುವಂತ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕ ನಿಗದಿ ಪಡಿಸಲಾಗಿದೆ.
ಮಾರ್ಚ್.6 ಮತ್ತು 7ರಂದು ತಮಿಳುನಾಡು ಸರ್ಕಾರಕ್ಕೆ ಒಡವೆಗಳನ್ನು ಹಿಂದಿರುಗಿಸಲು ದಿನಾಂಕ ನಿಗದಿ ಪಡಿಸಿದೆ. ಅಲ್ಲದೇ ಒಡವೆ ಸ್ವೀಕರಿಸಲು ತಮಿಳುನಾಡಿನ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ತಮಿಳುನಾಡಿನ ಗೃಹ ಪ್ರಧಾನ ಕಾರ್ಯದರ್ಶಿ ಹಾಗೂ ಐಜಿಪಿ ವಿಜೆಲೆನ್ಸ್ ಹಾಜರಿರಬೇಕು. ಒಡವೆ ಒಯ್ಯಲು 6 ಟ್ರಂಕ್ ಗಳನ್ನು ತರಲು ಕೋರ್ಟ್ ಸೂಚಿಸಿದೆ. ವೀಡಿಯೋ ಗ್ರಾಫರ್, ಪೋಟೋ ಗ್ರಾಫರ್ ಕರೆತರಲು ಸೂಚಿಸಿದೆ.
ಇನ್ನೂ ಎರಡು ದಿನಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಭದ್ರತೆಯನ್ನು ಕೈಗೊಳ್ಳೋದಕ್ಕೆ ಸೂಚಿಸಿರುವಂತ ಕೋರ್ಟ್, ಮುಂದಿನ ವಿಚಾರಣೆಯನ್ನು ಮಾರ್ಚ್.6ಕ್ಕೆ ನಿಗದಿ ಪಡಿಸಿದೆ.