ಡಿ. ಗ್ಯಾಂಗ್ ಗೆ ಸ್ಟೇಷನ್ ನಲ್ಲಿ ರಾಜಾತಿಥ್ಯ : ಬಿರಿಯಾನಿ ಬೆನ್ನಲ್ಲೇ ಸಿಗರೇಟ್ ಸರಬರಾಜು.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಆಗ್ರಹಗಳು ಕೇಳಿಬರುತ್ತಿದೆ.ಇದರ ನಡುವೆ ಕೊಲೆ ಆರೋಪಿಗಳಾದ ಡಿ ಗ್ಯಾಂಗ್ ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ

ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಸಿಗರೇಟ್ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸರ ವಶದಲ್ಲಿರುವ ಆರೋಪಿಗಳಿಗೆ ಬಿರಿಯಾನಿ ಊಟ ತರಿಸಿಕೊಟ್ಟ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪೊಲೀಸ್ ಕಸ್ಟಡಿಯಲ್ಲಿ ಇರುವ ಆರೋಪಿಗಳಿಗೆ ಹೋಟೆಲ್ನಿಂದ ಬಿರಿಯಾನಿ ಊಟ ತಂದು ಕೊಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು . ಈ ಬೆನ್ನಲ್ಲೇ ಆರೋಪಿಗಳಿಗೆ ಸಿಗರೇಟ್ ಸರಬರಾಜು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾನೂನಿನಲ್ಲಿ ಜನಸಾಮಾನ್ಯರಿಗೊಂದು ರೂಲ್ಸ್..? ಸೆಲೆಬ್ರಿಟಿಗಳಿಗೊಂದು ರೂಲ್ಸ್ ಉಂಟಾ..? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

Latest Indian news

Popular Stories