ರಾಜ್ಯದಲ್ಲಿ ಡೆಂಗ್ಯೂ ಅಬ್ಬರ : ಒಂದೇ ವಾರಗಳಲ್ಲಿ 195 ಕ್ಕೂ ಹೆಚ್ಚು ಮಂದಿಗೆ ಸೋಂಕು

ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಹೆಚ್ಚಳವಾಗಿದ್ದು, ಒಂದೇ ವಾರಗಳಲ್ಲಿ 195 ಕ್ಕೂಹೆಚ್ಚು ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ 2,877 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಡೆಂಘಿ ಪಾಸಿಟಿವಿಟಿ ಶೇ. 21 ಕ್ಕೆ ಏರಿಕೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಕಳೆದ ಒಂದು ವಾರದಲ್ಲಿ ೮೭೯ ಮಂದಿಗೆ ಪರೀಕ್ಷೆ ನಡೆಸಿದ್ರೆ 186 ಮಂದಿಗೆ ಡೆಂಘಿ ದೃಢಪಟ್ಟಿದೆ. ಹೀಗಾಗಿ ಡೆಂಘಿ ವ್ಯಾಪಕವಾಗಿ ಹರಡುವ ಲಕ್ಷಣ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗ್ಯೂ ಜ್ವರವು ಜನರಿಗೆ ನಿರಂತರ ಬೆದರಿಕೆಯಾಗಿದೆ. ಇದು ಪ್ರತಿ ವರ್ಷ ಸುಮಾರು ಇಪ್ಪತ್ತು ಸಾವಿರ ಜನರನ್ನು ಕೊಲ್ಲುತ್ತದೆ. ಇದು ಬೇಸಿಗೆಯ ಕೊನೆಯಲ್ಲಿ ಸಂಗ್ರಹವಾಗುವ ವಿವಿಧ ನಗರಗಳಲ್ಲಿ ಸ್ಥಿರ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.

ಈಡಿಸ್ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ ಏಳು ದಿನಗಳಲ್ಲಿ ಹಲವಾರು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ನೀವು ಗಮನಿಸಬಹುದು.

Latest Indian news

Popular Stories