ಮಾಜಿ ಪರಿಷತ್ ಸದಸ್ಯ ಬಿ.ಟಿ,ದಯಾನಂದರೆಡ್ಡಿ ಸಹೋದರನ ಮನೆ ಮೇಲೆ ಇಡಿ ದಾಳಿ

ಆನೇಕಲ್: ವಿಧಾನಪರಿಷತ್ ಮಾಜಿ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಸಹೋದರ, ಉದ್ಯಮಿ ಬಿ.ಟಿ.ನಾಗರಾಜ್ ರೆಡ್ಡಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಿ.ಟಿ.ನಾಗರಾಜ್ ರೆಡ್ಡಿ ಅವರು ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಮಹೇಂದ್ರ ಹೋಮ್ಸ್ ಮತ್ತು ಗ್ರೂಪ್ ಆಫ್ ಕಂಪನಿಗಳ ಮಾಲೀಕರಾಗಿದ್ದು, ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು ಹಲವು ದಾಖಲೆಗಳು ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆ. ಬಿ.ಟಿ.ನಾಗರಾಜ್ ರೆಡ್ಡಿ ಇತ್ತೀಚೆಗೆ ಮಹೇಂದ್ರ ಹೋಮ್ಸ್ ಹೆಸರಲ್ಲಿ ಅಪಾರ್ಟ್ ಮೆಂಟ್ಸ್ ನಿರ್ಮಿಸಿದ್ದರು. ಅಲ್ಲದೇ ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.

Latest Indian news

Popular Stories