ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿಗಳ ದಾಳಿ:ಅಕ್ರಮ ದಾಸ್ತಾನು ಪತ್ತೆ

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಅಧೀನದಲ್ಲಿರುವ ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ರಾಜಸ್ಥಾನದಿದ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಗಂಧದ ತುಂಡು ದಾಸ್ತಾನು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಕೆ.ಆರ್.ಪುರಂ ವಲಯ ಅರಣ್ಯಾಧಿಕಾರಿ ರವು.ವಿ ನೇತೃತ್ವದಲ್ಲಿ ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಅಕ್ರಮ ದಾಸ್ತಾನು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ದಾಸ್ತಾನು ಹಿನ್ನೆಲೆಯಲ್ಲಿ ಎಂಪೋರಿಯಂ ವ್ಯವಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜಸ್ಥಾನ ಮೂಲದ ಗೌರವ್ ಸರಗೋಯಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Latest Indian news

Popular Stories