ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೆ ಸಾಲಿನ ದಾಖಲೆಯ 15ನೇ ಬಜೆಟ್ ಮಂಡಿಸಿದ್ದು ಇದಕ್ಕೆ ವಿರೋಧ ಪಕ್ಷಗಳು ವಿವಿಧ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಿವೆ ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯವರು ಬಾಯಿ ತೆರೆದರೆ ಬರಿ ಸುಳ್ಳುಗಳು ಹೊರ ಬರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೇವಲ ಪ್ರಚೋದನೆ ಮಾಡುವುದು ಬಿಜೆಪಿ ಅವರಿಗೆ ಅಭ್ಯಾಸವಾಗಿದೆ ಹಿಂದುಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದ್ದಾರೆ.ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ ಟೀಕೆ ಮಾಡುತ್ತಿದ್ದಾರೆ ಪ್ರತಿಪಕ್ಷಗಳು ಬಜೆಟ್ ಸಂದರ್ಭದಲ್ಲಿ ಆ ರೀತಿ ಹೇಳುವುದು ಸಹಜ.
ಗ್ಯಾರೆಂಟಿ ಜಾರಿ ಬಳಿಕ ಏನು ಮಾಡೋಕೆ ಆಗಲ್ಲ ಅಂದುಕೊಂಡಿದ್ದರು. ಆದರೆ ಈಗ ಇದೆಲ್ಲ ಮಾಡಿರೋದು ಬಿಜೆಪಿ ಅವರಿಗೆ ಆಶ್ಚರ್ಯ ಆಗಿದೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಬಿಜೆಪಿ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ