ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್‌: ಯತ್ನಾಳ್‌ ವಾಗ್ದಾಳಿ

ಜಯಪುರ:ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಬಿಜೆಪಿ ಇದನ್ನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.ಜೊತೆಗೆ ಹಿಂದೂ ಸಂಘಟನೆಗಳು ಕೂಡ ಇದನ್ನು ವಿರೋಧಿಸಿವೆ.

ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್‌ ಎಂದು ಶಾಸಕ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗಳಿಗೆ ಬರುವ ಅವಕಾಶ ಕಲ್ಪಿಸಿದರೆ, ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರಬಹುದು.ಅದು ಮಕ್ಕಳಲ್ಲಿ ಸಂಘರ್ಷ ಉಂಟು ಮಾಡುತ್ತದೆ. ಮಕ್ಕಳ ಮನಸ್ಸು ಆಕಾಶದಷ್ಟೇ ಶುಭ್ರವಾಗಿರುತ್ತದೆ.ಅವರ ಮನಸ್ಸಿನಲ್ಲಿ ಭೇದ ಭಾವ ತುಂಬುತ್ತಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಒಂದು ವರ್ಗದ ಓಲೈಕೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ” ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ಮಕ್ಕಳು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ.ಆದರೆ ಶಾಲೆಯಲ್ಲಿ ಸಮವಸ್ತ್ರ ಧರಿಸಿ ಬರಬೇಕು ಎಂದರು.

Latest Indian news

Popular Stories