ಬೆಂಗಳೂರು: ನಾನೇ ‘ಲಕ್ಷ್ಮಣ’, ಹಾಗಾಗಿ ಅಯೋಧ್ಯೆಗೆ ಈಗ ಹೋಗಲ್ಲಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರದ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹೋಗಲ್ಲ .
ಮುಂದೆ ಯಾವಾಗಲಾದರೂ ಹೋಗುವೆ. ನಾನೇ ಲಕ್ಷ್ಮಣ ಇದ್ದೇನೆ’ ಎಂದರು.
ಸಿಎಂ ಸ್ಥಾನದ ಬಗ್ಗೆ ಯತೀಂದ್ರ ಹೇಳಿಕೆ ಅವರ ವೈಯಕ್ತಿಕ, ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ 5 ವರ್ಷವೂ ಅವರೇ ಸಿದ್ದರಾಮಯ್ಯ ಸಿಎಂ ಆಗಬಹುದು. ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.