ನಾನು ಲೋಕಸಭಾ ಚುನಾವಣೆಗೆ ನಿಲ್ಲೋದಿಲ್ಲ – ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟನೆ

ಬೆಂಗಳೂರು: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಇದರ ಬಗ್ಗೆ ಅನಗತ್ಯ ಗೊಂದಲ ಬೇಡ ಎಂಬುದಾಗಿ ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಾನು ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಆಕಾಂಕ್ಷಿಯಲ್ಲ.

ನಾನು ಸ್ಪರ್ಧೆ ಕೂಡ ಮಾಡಲ್ಲ. ಆ ಬಗ್ಗೆ ವರಿಷ್ಠರಲ್ಲಿ ಟಿಕೆಟ್ ಕೂಡ ಕೇಳಿಲ್ಲ. ಕಾಂಗ್ರೆಸ್ ಹೈಕಮಾಂಡ್ ಯಾರನ್ನೇ ನಿಲ್ಲಿಸಿದರೇ ನಾನು ಬೆಂಬಲಿಸೋದಾಗಿ ತಿಳಿಸಿದರು.

ಚಾಮರಾಜನಗರ ಕ್ಷೇತ್ರದ ಲೋಕಸಭಾ ಚುನಾವಣೆಯ ಟಿಕೆಟ್ ಸುನೀಲ್ ಬೋಸ್ ಗೆ ಕೊಡಿ ಎಂಬುದಾಗಿ ಕ್ಷೇತ್ರದ ಶಾಸಕರು, ಮುಖಂಡರು ಹೇಳುತ್ತಿದ್ದಾರೆ. ಸುನೀಲ್ ಬೋಸ್ ಹೆಸರು ಕೂಡ ಚಾಲ್ತಿಯದಲ್ಲಿದೆ ಎಂಬುದಾಗಿ ಹೇಳುವ ಮೂಲಕ ಪುತ್ರ ಲೋಕಸಭಾ ಚುನಾವಣೆಗೆ ನಿಲ್ಲೋದಕ್ಕೆ ಟಿಕೆಟ್ ಆಕಾಂಕ್ಷಿಯಾಗಿರೋ ಸುಳಿವನ್ನು ನೀಡಿದರು.

ನಾನು ರಾಜಕೀಯಕ್ಕೆ ಬಂದು 40 ವರ್ಷಗಳಾಗಿವೆ. ಅನಗತ್ಯ ಗೊಂದಲ ಬೇಡ. ನಾನು ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದಿಲ್ಲ. ಇಲ್ಲಿ ಯಾರೇ ಕಾಂಗ್ರೆಸ್ ಪಕ್ಷದಿಂದ ನಿಂತರೂ ಅವರು ಗೆಲ್ಲಲಿದ್ದಾರೆ ಎಂಬುದಾಗಿ ತಿಳಿಸಿದರು.

Latest Indian news

Popular Stories