ಬೆಂಗಳೂರು: ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಾಲಕ ಕುಸಿದು ಬೀಳುತ್ತಿದ್ದಂತೆ ಎಚ್ಚೆತ್ತ ಕಂಡಕ್ಟರ್ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿದ್ದಾನೆ.
ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಎಂಟಿಸಿ ಬಸ್ ನೆಲಮಂಗಲದಿಂದ ದಾಸನಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಹೃದಯಾಘಾತದಿಂದ ಡೈವರ್ ಕುಸಿದು ಬಿದ್ದ ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೂಡಲೇ ಬಸ್ ಕಂಡಕ್ಟರ್ ಬೇಗನೆ ಚಾಲಕನ ಸೀಟಿಗೆ ಹಾರಿ ವಾಹನದ ನಿಯಂತ್ರಣವನ್ನು ತೆಗೆದುಕೊಂಡು ರಸ್ತೆಯಲ್ಲಿದ್ದ ಅನೇಕರ ಜೀವವನ್ನು ಉಳಿಸಿದರು.ವರದಿಗಳ ಪ್ರಕಾರ, ಕಿರಣ್ ಕುಮಾರ್ ಅವರು ನೆಲಮಂಗಲದಿಂದ ದಾಸನಪುರಕ್ಕೆ ಮಾರ್ಗ 256 ಎಂ / 1 ರಲ್ಲಿ ಕೆಎ 57 ಎಫ್ -4007 ವಾಹನ ಸಂಖ್ಯೆಯನ್ನು ನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗ ಕುಮಾರ್ ಹೃದಯಾಘಾತದಿಂದ ಕುಸಿದು ಬಿದ್ದರು. ಕಂಡಕ್ಟರ್ ಓಬಳೇಶ್ ಧೈರ್ಯದಿಂದ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಿ ಅಪಘಾತವನ್ನು ತಪ್ಪಿಸಿದರು ಹಾಗೂ ಎಲ್ಲರ ಜೀವ ಕಾಪಾಡಿದರು.
ನಂತರ, ಓಬಳೇಶ್ ಕುಮಾರ್ ಕಿರಣ್ ರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.