ಪ್ರಯಾಣಿಕರ ಸಂಖ್ಯೆ ಹೆಚ್ಚಳ, ನಮ್ಮ ಮೆಟ್ರೋಗೆ ಬೋಗಿ ಕೊರತೆ

ಬೆಂಗಳೂರು ಮೇ 11: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಒಂದೇ ದಿನ 7 ಲಕ್ಷ ಜನರು ಸಂಚಾರ ನಡೆಸಿ ಈಗಾಗಲೇ ದಾಖಲೆ ಬರೆದಿದ್ದಾರೆ. ಪೀಕ್ ಅವರ್‌ನಲ್ಲಿ ಮೆಟ್ರೋದಲ್ಲಿ ಕಾಲು ಹಾಕಲು ಜಾಗವಿಲ್ಲದಷ್ಟು ಜನದಟ್ಟಣೆ ಇರುತ್ತದೆ.

ಪ್ರತಿ ಮೆಟ್ರೋ ಬೋಗಿಯಲ್ಲಿ 1629 ಜನರು ಸಂಚಾರ ನಡೆಸಬಹುದು. ಆದರೆ ಪೀಕ್ ಅವರ್‌ನಲ್ಲಿ ಮೆಟ್ರೋ ಹತ್ತಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಬಿಎಂಆರ್‌ಸಿಎಲ್ ಎದುರಿಸುತ್ತರುವ ಬೋಗಿಗಳ ಕೊರತೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಯೋಜನೆಯ ವರದಿಯಂತೆ ಒಟ್ಟು 78 ರೈಲುಗಳು ಸಂಚಾರ ನಡೆಸಬೇಕಿತ್ತು. ಆದರೆ ಈಗ ಕೇವಲ 47 ರೈಲುಗಳು ಓಡುತ್ತಿವೆ. ಇದರಿಂದಾಗಿ ಜನರ ದಟ್ಟಣೆ ಹೆಚ್ಚಿದೆ. ಅದರಲ್ಲೂ ಪೀಕ್ ಅವರ್‌ನಲ್ಲಿ ದಟ್ಟಣೆ ತೀವ್ರವಾಗಿದೆ.

6 ಬೋಗಿಗಳ ರೈಲು: ಬಿಎಂಆರ್‌ಸಿಎಲ್ ಮೊದಲು 3 ಬೋಗಿಗಳ ರೈಲುಗಳನ್ನು ಓಡಿಸುತ್ತಿತ್ತು. ಜನರ ದಟ್ಟಣೆ ಅಧಿಕವಾದ ಬಳಿಕ 6 ಬೋಗಿಗಳ ರೈಲುಗಳನ್ನು ಓಡಿಸಲಾಗುತ್ತಿದೆ. ಆದರೂ ಸಹ ಬೋಗಿಗಳ ಕೊರತೆ ಎದುರಿಸುತ್ತಿದ್ದು, ಜನರ ದಟ್ಟಣೆಗೆ ಅನುಗುಣವಾಗಿ ರೈಲು ಓಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಇದೆ.

ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ, ವೈಟ್‌ಫೀಲ್ಡ್ ತನಕ ರೈಲು ಮಾರ್ಗ ವಿಸ್ತರಣೆಯಾಗಿದೆ. ಈ ಮಾರ್ಗದಲ್ಲಿ 43 ಬೋಗಿಗಳಿಗೆ ಬೇಡಿಕೆ ಇದೆ. ಆದರೆ ಪ್ರಸ್ತುತ 25 ರೈಲುಗಳು ಓಡುತ್ತಿವೆ. ಹಸಿರು ಮಾರ್ಗದಲ್ಲಿಯೂ ಸಿಲ್ಕ್ ಇನ್ಸಿಟಿಟ್ಯೂಟ್-ನಾಗಸಂದ್ರ ನಡುವೆ ರೈಲು ಸಂಚಾರ ನಡೆಸುತ್ತಿದೆ. ಈ ಮಾರ್ಗದಲ್ಲಿ 22 ರೈಲು ಓಡುತ್ತಿದೆ, 13 ಬೋಗಿಗಳ ಕೊರತೆ ಇದೆ.

Latest Indian news

Popular Stories