ಶೇ.10 ಬದಲು 10 ಯೂನಿಟ್ ‘ಉಚಿತ ವಿದ್ಯುತ್’ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದ್ದು, ಗೃಹ ಜ್ಯೋತಿ ಯೋಜನೆಯಡಿ ನೀಡಲಾಗುವ ಉಚಿತ ವಿದ್ಯುತನ್ನ ಶೇಕಡ 10 ಯೂನಿಟ್ ಬದಲಾಗಿ 10 ಯೂನಿಟ್ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಇಂಧನ ಸಚಿವ ಕೆ.ಜೆ ಜಾರ್ಜ್, “48 ಯೂನಿಟ್’ಗಿಂತ ಕಡಿಮೆ ಬಳಕೆ ಮಾಡುವವರಿಗೆ 10 ಪರ್ಸೆಂಟ್ ಹೆಚ್ಚುವರಿಯಾಗಿ ವಿದ್ಯುತ್ ನೀಡುತ್ತಿದ್ದೇವು. ಆದ್ರೆ, ಇದೀಗ 10 ಯೂನಿಟ್ ಕೊಡಲು ತೀರ್ಮಾನ ಮಾಡಿದ್ದೇವೆ. 48 ಯೂನಿಟ್ ಕೊಟ್ಟರೂ ಕಡಿಮೆ ಬಳಕೆ ಮಾಡ್ತಾ ಇದ್ದರು, ಕೇವಲ 20-25 ಯೂನಿಟ್ ಯುಸ್ ಮಾಡಿದಾಗ ಕೇವಲ 2 ಪರ್ಸೆಂಟ್ ಕೊಡಬೇಕಿತ್ತು. ಆದ್ರೆ, ಇದೀಗ 48 ಇರೋದು 58 ಯೂನಿಟ್ ಆಗುತ್ತದೆ” ಎಂದು ಹೇಳಿದರು.

ಕೆ.ಜೆ ಜಾರ್ಜ್, “ಇನ್ನೀದು ಮುಂದಿನ ಬಿಲ್ಲಿಂಗ್’ನಲ್ಲೇ ಇದು ಅನ್ವಯವಾಗಲಿದ್ದು, ಇಲಾಖೆಗೆ ಹೊರೆಯಾಗುತ್ತದೆ ಆದರೆ ಬಡವರಿಗೆ ಅನುಕೂಲ ಆಗುತ್ತದೆ” ಎಂದು ಸಚಿವರು ಹೇಳಿದರು. ಇನ್ನಿದಕ್ಕೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 500-600 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ ಎಂದರು.

Latest Indian news

Popular Stories