ಅಯ್ಯಪ್ಪಸ್ವಾಮಿ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದಖಾನ್

ತಿರುವನಂತಪುರA: ಸಾಂಪ್ರದಾಯಿಕವಾಗಿ ಮಣಿಮಾಲೆ ಧರಿಸಿ, ಇರುಮುಡಿ ಹೊತ್ತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾನುವಾರ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.
ಐದು ಕಿಲೋಮೀಟರ್ ಚಾರಣ ಮಾಡಿ ಬೆಟ್ಟಕ್ಕೆ ಆಗಮಿಸಿದ ಅವರು, ಸಾಂಪ್ರದಾಯಿಕ ಮಣಿಮಾಲೆ ಧರಿಸಿದ್ದರು. ಎಲ್ಲಾ ಭಕ್ತರಂತೆ ಇರುಮುಡಿ ಕಟ್ಟನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್.ವಾಸು ಮತ್ತು ಟಿಡಿಬಿ ಆಯುಕ್ತ ಬಿ.ಎಸ್. ತಿರುಮೇನಿ ಅವರಿಗೆ ವಾಲಿಯಾ ನಾದಪಂಥಾಲ್ ನಲ್ಲಿ ಸ್ವಾಗತ ನೀಡಿದರು.
ನಂತರ, ಅವರು ಅಯ್ಯಪ್ಪ ದೇವಾಲಯ ಮತ್ತು ಇತರ ಸಂಬAಧಿತ ದೇವಾಲಯಗಳ 18 ಪವಿತ್ರ ಮೆಟ್ಟಿಲುಗಳನ್ನು ಏರಿದರು. ಖಾನ್ ಅವರು ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಜಭವನಕ್ಕೆ ಮರಳಲಿದ್ದಾರೆ.
ಸನ್ನಿಧಾನಂ ನಿಂದ ಹೊರಡುವ ಮುನ್ನ ರಾಜ್ಯಪಾಲರು ಮಲಿಕಾಪುರಂ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಂಧದ ಸಸಿಯನ್ನು ನೆಡಲಿದ್ದಾರೆ ಮತ್ತು ಪುಣ್ಯಂ ಪೂಂಗವಾನA ಯೋಜನೆಗೆ ಸಂಬAಧಿಸಿದAತೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Latest Indian news

Popular Stories