ಬೆಂಗಳೂರು :ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿರುವುದನ್ನು ಮಡಿಕೇರಿ ವಕೀಲರ ಸಂಘ ತೀವ್ರವಾಗಿ ಖಂಡಿಸಿದ್ದು, ವಕೀಲರು ಇಂದು ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ನಡೆದ ಪ್ರಕರಣ ಹಿನ್ನಲೆಯಲ್ಲಿ 32 ವಕೀಲರ ಮೇಲೆ ರಾಮನಗರ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನು ರಾಜ್ಯವ್ಯಾಪಿ ವಕೀಲರು ಖಂಡಿಸಿದ್ದಾರೆ. ವಕೀಲರ ಮೇಲೆ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ ರಾಮನಗರದ ನ್ಯಾಯಾಲಯದ ಕಲಾಪಗಳನ್ನು ಅಲ್ಲಿನ ವಕೀಲರು ಬಹಿಷ್ಟರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ರಾಮನಗರದ ವಕೀಲ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪೊಲೀಸರ ನಿಲವು ಖಂಡಿಸಿ ಮಡಿಕೇರಿ ವಕೀಲರ ಸಂಘವು ಕೂಡ ನಿಣ೯ಯ ಕೈಗೊಂಡಿತ್ತು.ರಾಜ್ಯದ ವಕೀಲರ ಸಂಘಟನೆಗಳಿಂದ ನಾಳೆ ನಡೆಯವ ವಿಧಾನಸೌಧ ಚಲೋ ಸಂದರ್ಭ ಮಡಿಕೇರಿ ವಕೀಲರ ಸಂಘ ದಿಂದ ಕೂಡ ಸದಸ್ಯರು ತೆರಳಿದ್ದಾರೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್ ಮಾಹಿತಿ ನೀಡಿದರು. ವಕೀಲರ ವಿರುದ್ದದ ಮೊಕದ್ದಮೆಯನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ದೌಜ೯ನ್ಯಕ್ಕೆ ಕಡಿವಾಣ ಬೀಳಬೇಕೆಂದು ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ. ನಾಗರಾಜ್ ಒತ್ತಾಯಿಸಿದ್ದಾರೆ.