ಬೆಂಗಳೂರು: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ಸರ್ಕಾರ ಅತ್ಯುನ್ನತ ಗೌರವ ಯುತವಾದ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ತಮಟ್ವಿಡರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯವಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿ ಈಗಿನ ಎಲ್ಲಾ ರಾಜಕಾರಣಿಗಳಿಗೂ ಎಲಿಕೆ ಅಡ್ವಾಣಿ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಿರುವ ರಾಜಕಾರಣಿ ಎಲ್ ಕೆ ಅಡ್ವಾಣಿ. ಅವರ ಮೇಲೆ ಒಂದು ಆಪಾದನೆ ಬಂದಾಗ ಆಪಾದನೆ ಮುಕ್ತ ಆಗೋವರೆಗೂ ಕೂಡ ಲೋಕಸಭೆಗೆ ಹೋಗಲ್ಲ ಎನ್ನುವ ಮಹಾಪುರುಷ LK ಅಡ್ವಾನಿಯವರು.ನಮ್ಮೆಲ್ಲರಿಗೂ ಕೂಡ ಅವರು ಹಿರಿಯರು ಮಾರ್ಗದರ್ಶಕರು ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಸಿಕ್ಕಿದೆ ಅಂತ ಕೇಳಿದ್ದಕ್ಕೆ ನಮ್ಮ ಎರಡು ಕಿವಿಗಳು ಪವಿತ್ರ ಆಗಿದ್ದು, ತುಂಬಾ ಸಂತೋಷವಾಗಿ ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು.
ಅಡ್ವಾಣಿ ಅವರು ದೇಶದ ಅನೇಕ ಹುದ್ದೆಗಳನ್ನು ಪಡೆದಂತಹ ಸಂದರ್ಭದಲ್ಲಿ ಅಭಿವೃದ್ಧಿ ಮಾಡಿದ್ದು ಹೌದು. ದೇಶದ ಅಭಿವೃದ್ಧಿ ಮಾಡಬೇಕಾದರೆ ಉನ್ನತ ಸ್ಥಾನ ಹೋಗಬೇಕಾದರೆ ಸಂಘಟನೆ ಬಹಳ ಮುಖ್ಯವಾದದ್ದು.ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರು ಕರ್ನಾಟಕಕ್ಕೆ ಬಂದು ದಕ್ಷಿಣ ಭಾರತದ ಬಿಜೆಪಿಯ ಕೆಲವೇ ಪದಾಧಿಕಾರಿಗಳ ಜೊತೆ ಸಭೆ ಮಾಡಿದರು.
ಅವರ ಜೊತೆ ಈ ಸಭೆಯಲ್ಲಿ ಕೇವಲ 50 ಜನ ಸಾಮಾನ್ಯ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದು ನಿಜಕ್ಕೂ ರೋಮಾಂಚನವಾಯಿತು ಇಂತಹ ರಾಷ್ಟ್ರೀಯ ನಾಯಕರು ನಮ್ಮಂತ ಅಂತ ಸಾಮಾನ್ಯ 50 ಜನರೊಂದಿಗೆ ಸತಿ ಮಾಡುತ್ತಿದ್ದಾರೆ ಎಂದು. ಭಾರತ ರತ್ನಕ್ಕೆ ಒಳ್ಳೆಯ ಗೌರವ ಸಿಕ್ಕಿದೆ ಎಂದು ಸ್ವಾಗತ ಮಾಡುತ್ತೇನೆ ಎಂದರು.