ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 218 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಮಾಡಿದ್ದು, ದೇವನಹಳ್ಳಿ ಠಾಣೆಯ ಪಿಎಸ್‌ಐ ಶಿವಪ್ಪ ಎಂ ನಾಯಕ್ ಅವರನ್ನು ರಾಮಮೂರ್ತಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ.
ಶಿವಪ್ಪ ಅವರನ್ನು ವೈಟ್ ಫೀಲ್ಡ್ ಪೊಲೀಸ್ ಠಾಣೆ, ರಾಮದೇವಿ ಬಿಎಸ್ ಅವರನ್ನು ಮಹದೇವಪುರ ಪೊಲೀಸ್ ಠಾಣೆ, ಮೂರ್ತಿ ಅವರನ್ನು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮಂಜುನಾಥ್ ಹೆಚ್ ಅವರನ್ನು ವರ್ತೂರು ಪೊಲೀಸ್ ಠಾಣೆಯಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ, ಮೌನೇಶ್ ಅವರನ್ನು ವರ್ತೂರು ಪೊಲೀಸ್ ಠಾಣೆಗೆ, ಅಮರೇಶ್ ಅವರನ್ನು ಕೋರಮಂಗಲ ಠಾಣೆ, ಶಿವರಾಜ ಎಂ.ಜೆ ಅವರನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.