200 ಬಂದೂಕುಧಾರಿಗಳಿಂದ ಮಣಿಪುರ ಪೊಲೀಸ್ ಅಧಿಕಾರಿಯ ಅಪಹರಣ

ಮಣಿಪುರ:ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿರುವ ಸಮಯದಲ್ಲಿ, ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯನ್ನು 200 ಶಸ್ತ್ರಸಜ್ಜಿತ ವ್ಯಕ್ತಿಗಳು ಮನೆಯಿಂದ ಅಪಹರಿಸಿದ್ದರು. ಆದರೆ, ಪೊಲೀಸರ ದಿಢೀರ್ ಕ್ರಮದೊಂದಿಗೆ ಅಧಿಕಾರಿಯನ್ನು ಸೆರೆ ಹಿಡಿದವರಿಂದ ಬಿಡುಗಡೆ ಮಾಡಲಾಯಿತು.

ಇಂಫಾಲ್ ಪಶ್ಚಿಮದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೊಯಿರಾಂಗ್ಥೆಮ್ ಅಮಿತ್ ಸಿಂಗ್ ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ ನಿವಾಸದಿಂದ ಅರಂಬೈ ತೆಂಗೋಲ್ ಎಂಬ ಮೈಟೆ ಸಂಘಟನೆಯ ಶಂಕಿತ ಸದಸ್ಯರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಂಬೈ ತೆಂಗೋಲ್ ಕಾರ್ಯಕರ್ತರು ಎಂದು ನಂಬಲಾದ ಸುಮಾರು 200 ಶಸ್ತ್ರಸಜ್ಜಿತ ಶಂಕಿತರು ಮಾಯೆಂಗ್‌ಬಾಮ್ ಅವರ ಮನೆಗೆ ನುಗ್ಗಿ ಅವರ ಆಸ್ತಿಯನ್ನು ಧ್ವಂಸಗೊಳಿಸಿ ನಂತರ ಅವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಘಟನೆ ವರದಿಯಾದ ನಂತರ ಭಾರತೀಯ ಸೇನೆ ಸೇರಿದಂತೆ ಭದ್ರತಾ ಪಡೆಗಳನ್ನು ಕರೆಸಲಾಯಿತು ಎಂದು ಅವರು ಹೇಳಿದರು.

ಘಟನೆ ವರದಿಯಾದ ತಕ್ಷಣ, ಪೊಲೀಸರು ಮತ್ತು ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು, ಕೆಲವೇ ಗಂಟೆಗಳಲ್ಲಿ ಕುಮಾರ್ ಅವರನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದರು. ನಂತರ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

Latest Indian news

Popular Stories