ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ‘NDA’ ಗೆಲ್ಲುತ್ತೆ ಅದರಲ್ಲಿ ನಾನು ಒಬ್ಬ : KS ಈಶ್ವರಪ್ಪ ವಿಶ್ವಾಸ

ಬೆಂಗಳೂರು: ಇವರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್ ಡಿ ಎ 28ಕ್ಕೂ 28 ಸ್ಥಾನಗಳನ್ನು ಗೆಲ್ಲಲಿದೆ ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆಲ್ಲುತ್ತೇನೆ ಗೆದ್ದು ನರೇಂದ್ರ ಮೋದಿಯವರ ಥರ ಹೋಗುತ್ತೇನೆ ಎಂದು ಕೆಎಸ್ ಈಶ್ವರಪ್ಪ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ತಿರುಳಿದ್ದರು. ಈ ವಿಷಯದ ಕುರಿತಾಗಿ ಪ್ರತಿಕ್ರಿಯೆ ನೀಡಿದರು.

ಹಿರಿಯರ ಮಾತನ್ನು ಮೀರಬಾರದೆಂದು ದೆಹಲಿಗೆ ಹೋದೆ. ಭಗವಂತ ನನ್ನ ಜೊತೆಗೆ ಇದ್ದಾನೆ ಅನ್ನೋದಕ್ಕೆ ಇದೆ ಸಾಕ್ಷಿ. ನನಗೆ ಅಮಿತ್ ಶಾ ಭೇಟಿಯಾಗಲಿಲ್ಲ. ನಾನು ಅನೇಕ ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಿದ್ದೆ ಹೀಗಾಗಿ ಅವರಿಗೆ ಉತ್ತರ ಕೊಡಲು ಕಷ್ಟವಾಗುತ್ತದೆ.ಹಾಗಾಗಿ ಅವರು ಭೇಟಿಗೆ ಅವಕಾಶ ಕೊಡಲಿಲ್ಲ. ಅವರನ್ನೇ ಏನಾದರೂ ನಾನು ಭೇಟಿಯಾಗಿದ್ದಾರೆ, ನನ್ನ ಎಲ್ಲಾ ಪ್ರಶ್ನೆಗಳು ಅವರ ಮುಂದೆ ಇಡುತ್ತಿದ್ದೆ ಎಂದು ಅವರು ಹೇಳಿದರು.

Latest Indian news

Popular Stories