ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮೊಹಮ್ಮದ್ ನಲಪಾಡ್’ ವಿರುದ್ಧ ‘ಜಾಮೀನು ರಹಿತ ವಾರೆಂಟ್’ ಜಾರಿ

ಬೆಂಗಳೂರು: ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾಗಿದ್ದಂತ ಪ್ರಕರಣ ಸಂಬಂಧ ಕೋರ್ಟ್ ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮೊಹಮ್ಮದ್ ನಲಪಾಟ್ ಅವರು ಹಾಜರಾಗಿರಲಿಲ್ಲ. ಕೋರ್ಟ್ ಗೆ ಗೈರು ಹಾಜರಾದಂತ ಇಂತಹ ನಾಯಕರಿಗೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುವ ಮೂಲಕ, ಶಾಕ್ ನೀಡಲಾಗಿದೆ

ಈ ಕುರಿತಂತೆ ವಿಚಾರಣೆ ನಡೆಸಿದಂತ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ 2022ರ ಆಗಸ್ಟ್ ನಲ್ಲಿ ನಡೆಸಿದಂತ ಪ್ರತಿಭಟನೆ ಸಂಬಂಧದ ಪ್ರಕರಣದಲ್ಲಿ ಕೋರ್ಟ್ ಗೆ ಗೈರಾಗಿರುವಂತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮೊಹಮ್ಮದ್ ನಲಪಾಡ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಅಂದಹಾಗೇ 2022ರ ಆಗಸ್ಟ್ ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂತಹ ಪ್ರಕರಣ ಸಂಬಂಧ ನಿರಂತರವಾಗಿ ಕೋರ್ಟ್ ಗೆ ಗೈರು ಹಾಜರಿ ಆಗಿದ್ದರು. ಈ ಹಿನ್ನಲೆಯಲ್ಲಿ ವೀರಪ್ಪ ಮೊಯ್ಲಿ ಹಾಗೂ ಮೊಹಮ್ಮದ್ ನಲಪಾಡ್ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಾರಿಗೊಳಿಸಿದೆ.

Latest Indian news

Popular Stories