ಪ್ರಧಾನಿ ಮೋದಿ’ ವಿರುದ್ಧ ಮಾಜಿ ಪರಿಷತ್ ಸದಸ್ಯ ‘ರಮೇಶ್ ಬಾಬು’ ಹಿಗ್ಗಾಮುಗ್ಗಾ ವಾಗ್ಧಾಳಿ

ಬೆಂಗಳೂರು: ಬಿಜೆಪಿ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡು ಶುದ್ಧೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಇದು ಪ್ರಜಾಪ್ರಭುತ್ವದ ಅಣಕ. ಸ್ವಯಂ ಘೋಷಿತ ವಿಶ್ವನಾಯಕ ನರೇಂದ್ರ ಮೋದಿ ಅವರು ʼನಾ ಖಾವೂಂಗಾ, ನಾ ಖಾನೇದೂಂಗಾʼ ಎಂದು ಹೇಳುತ್ತಾ ಬಂದಿದ್ದರು. ಈಗ ಅದಕ್ಕೆ ಹೊಸ ವ್ಯಾಖ್ಯಾನ ನೀಡುವ ಕಾಲ ಬಂದಿದೆ.

ʼಮೋದಿ ಅವರು ತಿನ್ನಕ್ಕೆ ಬಿಡಲ್ಲ, ನುಂಗುವವರನ್ನು ಮುಟ್ಟೊದಿಲ್ಲʼ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.

ಇಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, 2014 ರಿಂದ ಇಲ್ಲಿಯ ತನಕ ಇ.ಡಿ, ಐ.ಟಿ, ಸಿಬಿಐ ಸೇರಿದಂತೆ ಈ ರೀತಿಯ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಶೇ 99 ರಷ್ಟು ಪ್ರಕರಣಗಳನ್ನು ವಿರೋಧ ಪಕ್ಷ ಮತ್ತು ಅದರ ನಾಯಕರ ಮೇಲೆ ಹೂಡಲಾಗಿದೆ. ಬಿಜೆಪಿಯವರ ಮೇಲೂ ಒಂದಷ್ಟು ಪ್ರಕರಣಗಳಿವೆ ಆದರೆ ಈ ಪ್ರಕರಣಗಳು ಮುಂದಕ್ಕೂ ಹೋಗುತ್ತಿಲ್ಲ, ಹಿಂದಕ್ಕೂ ಹೋಗುತ್ತಿಲ್ಲ. ನಿಂತಲ್ಲೇ ನಿಂತಿವೆ.

ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸುಮಾರು ರೂ 48 ಕೋಟಿ ರೂಪಾಯಿಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣ ಎದುರಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಶ್ರೀರಕ್ಷೆ ನೀಡುತ್ತಿದೆ.

ಡಿಸಿಎಂ ಆದಂತಹ ಡಿ.ಕೆ.ಶಿವಕುಮಾರ್‌ ಅವರು ಗುಜರಾತ್‌ ಚುನಾವಣೆ ವೇಳೆ ಪಕ್ಷ ಉಳಿಸುವ ಕೆಲಸ ಮಾಡಿದ್ದಕ್ಕೆ ರೂ 7 ಕೋಟಿ ಮೊತ್ತದ ಯಾವುದೋ ಪ್ರಕರಣವನ್ನು ಅವರ ಮೇಲೆ ಹಾಕಲಾಯಿತು. ಬಂಧನ ಸೇರಿದಂತೆ ಮಾನಸಿಕ ಕಿರುಕುಳ ನೀಡಲಾಗಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಸುಳ್ಳು ಪ್ರಕರಣ ಹೂಡಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ.

Latest Indian news

Popular Stories