ಯಾವ ಮಾನದಂಡದ ಮೇಲೆ ನನ್ನನ್ನು ಕೈ ಬಿಟ್ಟಿದ್ದಾರೆ-ವೀಣಾ ಕಾಶಪ್ಪನವರ್‌ ಖಡಕ್‌ ಪ್ರಶ್ನೆ

ಗಳೂರು, ಮಾರ್ಚ್ 21: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಪಟ್ಟಿಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವೀಣಾ ಕಾಶಪ್ಪನವರ್‌ ಅವರ ಹೆಸರು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಕೂಡ ಟಿಕೆಟ್‌ ಕೈ ತಪ್ಪಿರುವುದು ಬಹುತೇಕ ಖಚಿತವಾಗುತ್ತಿದ್ದಂತೆ ವೀಣಾ ಕಾಶಪ್ಪನವರ್ ಭಾವುಕರಾಗಿದ್ದಾರೆ.

ಹೈಕಮಾಂಡ್‌ ನಾಯಕರ ಭೇಟಿ ಬಳಿಕ ಕಣ್ಣೀರಿಟ್ಟ ಅವರು, ಭಾವುಕರಾಗಿ ಪಕ್ಷದ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿನ್ನೆ (ಮಾರ್ಚ್ 21) ಹೈಕಮಾಂಡ್‌ ಭೇಟಿ ಬಳಿಕ ಮಾತನಾಡಿದ ಅವರು, ನನಗೆ ಗೊತ್ತಾಗಬೇಕು ಯಾವ ಮಾನದಂಡದ ಮೇಲೆ ನನ್ನನ್ನು ಕೈ ಬಿಟ್ಟಿದ್ದಾರೆ ಎಂದು, ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದೇ ಇದ್ದರೆ, ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದರೆ, ಇಲ್ಲಾ, ಕ್ಷೇತ್ರದ ಜನ ನನ್ನ್ನ್ನು ಗುರುತಿಸದೇ ಇದ್ದರೆ ಹೀಗೆ ಏನಾದರೂ ಕಾರಣ ಬೇಕಲ್ಲ.. ನನಗೆ ಟಿಕೆಟ್‌ ನೀಡದರೆ ಇರಲು ಏನು ಕಾರಣ ಎಂದು ಗೊತ್ತಾಗಬೇಕು ಎಂದಿದ್ದಾರೆ.ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರ ಜೊತೆಗೆ ನಾನಿದ್ದೇನೆ. ಅವರ ಕಷ್ಟ ಸುಖಗಳಿಗೆ ಆಗಿದ್ದೇನೆ.

ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಲೋಕಸಭಾ ವ್ಯಾಪ್ತಿಯಲ್ಲಿ ಬರು ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿ ಇಂದು ಶಾಸಕರೇ ಬೇಡ ಎನ್ನುತ್ತಿದ್ದಾರೆ ಎಂದರೆ, ಅವರನ್ನೇ ಕೇಳಬೇಕು ಯಾವ ಮಾನದಂಡದ ಮೇಲೆ ನಾನು ಬೇಡ ಎಂದು ಕೇಳಬೇಕು ಎಂದರು.’ಒಬ್ಬ ಹೆಣ್ಣು ಮಗಳಿಗೆ ಅನ್ಯಾಯ’: ಟಿಕೆಟ್‌ ಕೈ ತಪ್ಪಿದ್ದಕ್ಕೆ ಗಳಗಳನೆ ಅತ್ತ ವೀಣಾ ಕಾಶಪ್ಪನವರ್ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕರು ನನಗೆ ಮಾತನ್ನು ನೀಡಿದ್ದರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇವೆ. ನಾವು ನಿಮ್ಮ ಹೆಸರನ್ನು ಹೇಳುತ್ತೇವೆ. ನಾವು ನಿಮಗೆ ಸಂಪೂರ್ಣವಾದ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು.

Latest Indian news

Popular Stories