ನೀರಿಲ್ಲದೆ ಬೇಸತ್ತ ಜನ! ವರ್ಕ್ ಫ್ರಂ ಹೋಂ ಕೊಡಿ ಎಂದು ಐಟಿ ಕಂಪನಿಗಳ ಒತ್ತಾಯ

ಬೇಸಿಗೆ ಮಧ್ಯದಲ್ಲಿಯೇ ಎಂದರೆ ಮಾರ್ಚ್ ತಿಂಗಳು ಮುಗಿಯುವ ಹೊತ್ತಿಗೆ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತುಂಬಾನೇ ತೀವ್ರವಾಗಿದೆ, ಇನ್ನೂ ಎರಡು ಮೂರು ತಿಂಗಳ ಬೇಸಿಗೆಯನ್ನು ಮಹಾನಗರ ಹೇಗೆ ಸಹಿಸಿಕೊಳ್ಳುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ನೋಡಿ. ಬೆಂಗಳೂರಿನ ಅನೇಕ ನಿವಾಸಿಗಳ ದೈನಂದಿನ ಜೀವನಕ್ಕೆ ಈ ನೀರಿನ ಸಮಸ್ಯೆ ಎಂದರೆ ನೀರಿನ ಕೊರತೆ ಕೊಡಲಿ ಏಟು ನೀಡಿದೆ.

ತೀವ್ರವಾದ ನೀರಿನ ಬಿಕ್ಕಟ್ಟಿನಲ್ಲಿ ಇಡೀ ಬೆಂಗಳೂರು ನಗರ ಸಿಲುಕಿರುವಾಗ, ಕೆಲವು ನೆಟ್ಟಿಗರು ಐಟಿ ಉದ್ಯಮ ಮತ್ತು ಸರ್ಕಾರವನ್ನು ತಮಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ವರ್ಕ್ ಫ್ರಮ್ ಹೋಂ’ ಆಯ್ಕೆಯನ್ನು ತಾತ್ಕಾಲಿಕ ಆಧಾರದ ಮೇಲೆ ನೀಡಿದರೆ, ಅದು ಬೆಂಗಳೂರಿನ ನೀರಿನ ಸಮಸ್ಯೆಯನ್ನು ಆದಷ್ಟು ಮಟ್ಟಿಗಾದರೂ ಕಡಿಮೆ ಮಾಡುತ್ತದೆ ಎಂದು ಅವರು ವಾದಿಸುತ್ತಾರೆ. ಕರ್ನಾಟಕ ಸರ್ಕಾರದ ಪ್ರಕಾರ, ಬೆಂಗಳೂರು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ಈಗ, ಅನೇಕ ಕಾನೂನು ವಿದ್ವಾಂಸರು ಮತ್ತು ಜಲ ತಜ್ಞರು ಸಹ ಕರ್ನಾಟಕ ಸರ್ಕಾರವು ನೀರಿನ ಬಿಕ್ಕಟ್ಟನ್ನು ನಿವಾರಿಸಲು ‘ವರ್ಕ್ ಫ್ರಂ ಹೋಂ’ ಉಪಕ್ರಮವನ್ನು ಪ್ರೋತ್ಸಾಹಿಸುವಂತೆ ಸೂಚಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ವಿಶೇಷವಾಗಿ ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡುವ ಅಲ್ಪಾವಧಿಯ ಪರಿಹಾರವನ್ನು ಪ್ರಸ್ತಾಪಿಸಿದರು.

ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗೆ ಅವಕಾಶ ನೀಡುವುದರಿಂದ ಸುಮಾರು 10 ಲಕ್ಷ ಜನರು ತಮ್ಮ ಊರುಗಳಿಗೆ ಮರಳಬಹುದು, ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ನ್ಯಾಯಮೂರ್ತಿ ರಾವ್ ಹೇಳಿದರು.

Latest Indian news

Popular Stories