ಪ್ರಜ್ವಲ್ ರೇವಣ್ಣ’ ಮತ್ತೆ 4 ದಿನ SIT ಕಸ್ಟಡಿಗೆ ; ಕೋರ್ಟ್ ಆದೇಶ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರನ್ನು ಮತ್ತೆ 4 ದಿನ ಜೂ.29 ರವರೆಗೆ ಎಸ್ ಐ ಟಿ ಕಸ್ಟಡಿಗೆ ನೀಡಿ ಬೆಂಗಳೂರಿನ ಕೋರ್ಟ್ ಆದೇಶ ಹೊರಡಿಸಿದೆ.

ಇದೀಗ ಮತ್ತೆ ಅವರನ್ನು 4 ದಿನ ಎಸ್ ಐ ಟಿ ಅಧಿಕಾರಿಗಳ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.ಹೆಚ್ಚಿನ ವಿಚಾರಣೆಯ ಅಗತ್ಯವಿರುವ ಹಿನ್ನೆಲೆ ಪ್ರಜ್ವಲ್ ರನ್ನು ಎಸ್ ಐ ಟಿ ವಶಕ್ಕೆ ಪಡೆದಿದೆ ಎನ್ನಲಾಗಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಅಶ್ಲೀಲ ವಿಡಿಯೋ ಚಿತ್ರೀಕರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಮೂರು ಗಂಭೀರ ಪ್ರಕರಣಗಳು ದಾಖಲಾಗಿದ್ದು. ಈಗಾಗಲೇ ನ್ಯಾಯಾಂಗ ಬಂಧನದಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

Latest Indian news

Popular Stories