ಪ್ರಜ್ವಲ್ ರೇವಣ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ : ಶಾಸಕ ಜಿಟಿ ದೇವೇಗೌಡ ಹೇಳಿಕೆ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ ಹೀಗಾಗಿ ಈ ಒಂದು ವಿಷಯದ ಕುರಿತಾಗಿ ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯ ನೀಡಿದ್ದು ಪ್ರಜ್ವಲ್ ಇದುವರೆಗೂ ಯಾರ ಸಂಪರ್ಕಕ್ಕೆ ಕೂಡ ಸಿಕ್ಕಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಎಲ್ಲಿದ್ದಾರೆ? ಯಾವಾಗ ಬರುತ್ತಾರೆ? ಎಂದು ಯಾರಿಗೂ ಗೊತ್ತಿಲ್ಲ. ಪ್ರಜ್ವಲ್ ಮನೆಯವರಿಗೂ ಗೊತ್ತಿಲ್ಲ. ನಮಗೂ ಗೊತ್ತಿಲ್ಲ ಪ್ರಜ್ವಲ್ ಯಾರು ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ. ಈಗಗ್ಲೇ ಪ್ರಜ್ವಲ್ ನನ್ನು ಪಕ್ಷದಿಂದ ಅಮಾನತು ಕೂಡ ಮಾಡಲಾಗಿದೆ. ತಪ್ಪು ಮಾಡಿದರೆ ನೂರಕ್ಕೆ ನೂರು ಶಿಕ್ಷೆ ಆಗಲಿ. ಇನ್ನೇನಿದ್ದರೂ ಕೂಡ ಸರ್ಕಾರದ ಜವಾಬ್ದಾರಿಯಾಗಿದೆ.

ಪ್ರಜ್ವಲ್ ವಿದೇಶಕ್ಕೆ ಯಾಕೆ ಹೋದರು ಯಾವಾಗ ಬರುತ್ತಾರೆ ಯಾವಾಗ ಬರುವುದಿಲ್ಲ ಇದು ಯಾವುದರ ಕುರಿತು ನಮಗೆ ಸುಳಿವು ಇಲ್ಲ. ಅವರ ಕುಟುಂಬಕ್ಕೆ ಗೊತ್ತಿಲ್ಲದ ಮೇಲೆ ನಮಗೆ ಹೇಗೆ ಗೊತ್ತಿರುತ್ತದೆ. ಈಗಾಗಲೇ ಬ್ಲೂ ಕಾರ್ನರ್ ಹಾಗೂ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. ಇನ್ನು ಮುಂದಿನದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

Latest Indian news

Popular Stories