ಬೆಂಗಳೂರು: ನಗರದ ಯಲಹಂಕ ವಲಯದ ಕೊಡಿಗೇಹಳ್ಳಿ ವಾರ್ಡ್ ನಲ್ಲಿ ಸುಮಾರು 85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಿಬಿಎಂಪಿ ವಶಪಡಿಸಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಬಿಎಂಪಿಯು, ನಗರದ ಯಲಹಂಕ ವಲಯ ಬ್ಯಾಟರಾಯನಪುರ ವಿಭಾಗದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಒತ್ತುವರಿಮಾಡಿಕೊಂಡಿದ್ದ ಸುಮಾರು 85 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಪಾಲಿಕೆ ವಶಪಡಿಸಿಕೊಂಡಿದೆ ಎಂದಿದೆ.
ಬ್ಯಾಟರಾಯನಪುರ ವಿಭಾಗದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಾಗದಲ್ಲಿ ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು ಎಂದು ತಿಳಿಸಿದೆ.
ಅದರಂತೆ, ದಿನಾಂಕ: 13-02-2024 ರಂದು ಬಿಬಿಎಂಪಿಯ ಯಲಹಂಕ ವಲಯ ವಲಯದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದಿದೆ.
ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ 4 ಜೆ.ಸಿ.ಬಿ. 6 ಟಿಪ್ಪರ್‌ಗಳು, 12 ಟ್ರಾಕ್ಟರ್‌ಗಳು, 140 ಪೊಲೀಸ್ ಸಿಬ್ಬಂದಿ, 70 ಜನ ಕಾರ್ಮಿಕರು ಮತ್ತು ಗ್ಯಾಂಗ್‌ಮನ್‌ಗಳ ಸಹಾಯದೊಂದಿಗೆ ಸುಮಾರು 2.755 ಎಕರೆ (120000.00 ಚದರ ಅಡಿಗಳ ಆಸ್ತಿ) ಜಾಗದ ಆಸ್ತಿ ಮೌಲ್ಯ ಸುಮಾರು 85 ಕೋಟಿ ರೂ.ಗಳ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿರುತ್ತದೆ ಎಂದು ತಿಳಿಸಿದೆ.