ಅತ್ಯಾಚಾರ ಆರೋಪ ಕೇಸ್‌ : ಪ್ರಜ್ವಲ್‌ ರೇವಣ್ಣ ಕರೆತರಲು ʻSITʼ ಕಾನೂನು ಅಸ್ತ್ರ!

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣರನ್ನು ಕರೆತರಲು ಎಸ್‌ ಐಟಿ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಆರೋಪದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ ಐಟಿ ಎರಡ್ಮೂರು ಆಯಾಮಗಳಲ್ಲಿ ತನಿಖೆ ನಡೆಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಪ್ರಜ್ವಲ್‌ ರೇವಣ್ಣರನ್ನು ಕರೆತರಲು ವಿದೇಶಕ್ಕೆ ಹೋಗಲಿದೆ ಎನ್ನುವ ಮಾಹಿತಿ ಬಂದಿದೆ.

ಮೊದಲು ಪ್ರಜ್ವಲ್‌ ರೇವಣ್ಣ ವಿರುದ್ದದ ಪ್ರಕರಣವನ್ನು ತನಿಖೆ ಮಾಡಿ ಯಾವುದಾದರೂ ಒಂದು ಪ್ರಕರಣದಲ್ಲಿ ಚಾರ್ಜ್‌ ಶೀಟ್‌ ಅನ್ನು ಕೋರ್ಟ್‌ ಗೆ ಸಲ್ಲಿಕೆ ಮಾಡಿ ಬಳಿಕ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದ್ದು, ಪ್ರಜ್ವಲ್‌ ರೇವಣ್ಣ ಬಂದ ಬಳಿಕ ವಿಚಾರಣೆ ನಡೆಸಲು ಎಸ್‌ ಐಟಿ ಸಿದ್ದತೆ ನಡೆಸಿದೆ. ಎಫ್‌ ಎಸ್‌ ಎಲ್‌ ರಿಪೋರ್ಟ್‌ ಬಂದ ಬಳಿಕ ಕಾನೂನು ಅಸ್ತ್ರ ಪ್ರಯೋಗಿಸಲು ಎಸ್‌ ಐಟಿ ನಿರ್ಧರಿಸಿದೆ.

Latest Indian news

Popular Stories