ಬೆಂಗಳೂರಿನಲ್ಲಿ ‘ವಾಟರ್ ಟ್ಯಾಂಕರ್’ ಗೆ ದರ ಫಿಕ್ಸ್ : ಅಧಿಸೂಚನೆ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನತೆ ನೀರಿಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಈ ಹಿನ್ನೆಲೆ ಬೆಂಗಳೂರಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯತೆ ಇದ್ದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಟ್ಯಾಂಕರ್ ಗಳಿಗೆ ದರ ಫಿಕ್ಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಕಳಾಟಕ್ಕೆ ಇದೀಗ ಬ್ರೇಕ್ ಹಾಕಲಾಗಿದ್ದು, ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿದ ಜಿಲ್ಲಾಡಳಿತ. ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿ ಇದೀಗ ಟ್ಯಾಂಕರ್ ಗೆ ದರ ಫಿಕ್ಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಟ್ಯಾಂಕರ್ ಮಾಲೀಕರು ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದರು. ಆದ್ದರಿಂದ ಇದೀಗ ಜುಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಟ್ಯಾಂಕರ್ ಗೆ ಇಂತಿಷ್ಟು ದರ ಎಂದು ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕಟಣೆಯಲ್ಲಿ ಸೂಚಿಸಿರುವಂತೆ ಒಂದು ಟ್ಯಾಂಕರ್ ಗೆ ಆರುನೂರು ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಈ ಹಿಂದೆ ಟ್ಯಾಂಕರ್ ಒಂದಕ್ಕೆ ಮಾಲೀಕರು 1000 ದಿಂದ 1200 ರೂಪಾಯಿವರೆಗೆ ಜನರಿಂದ ದರ ವಸೂಲಿ ಮಾಡುತ್ತಿದ್ದರು ಇದೀಗ ಈ ಒಂದು ಕಳ್ಳಾಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಟ್ಯಾಂಕರ್ ಗೆ 600 ರೂಪಾಯಿ ದರವನ್ನು ನಿಗದಿ ಮಾಡಿ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

Latest Indian news

Popular Stories