ಪ್ರಮುಖ ಇನ್ಫೋಸಿಸ್ ಪ್ರಶಸ್ತಿಗೆ ಆಯ್ಕೆಗೆ ವಯೋಮಿತಿ ಪರಿಷ್ಕರಣೆ‌

ಬೆಂಗಳೂರು, ಮೇ 15: ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಭಾರತದ ಇನ್ಫೋಸಿಸ್ ಕಂಪನಿಯು ತನ್ನ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ISF) ವತಿಯಿಂದ ಸಂಶೋಧಕರನ್ನು ಉತ್ತೇಜಿಸುವ ಸಲುವಾಗಿ ‘ಇನ್ಫೋಸಿಸ್ ಪ್ರಶಸ್ತಿ’ ನೀಡುತ್ತಿದೆ. ಇದೀಗ ಈ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಶೋಧಕರ ವಯಸ್ಸಿನ ಮಿತಿ ಪರಿಷ್ಕರಣೆ ಮಾಡುವುದಾಗಿ ತಿಳಿಸಿದೆ.

ಇನ್ಫೋಸಿಸ್‌ ಪ್ರಶಸ್ತಿಗೆ ಹೊಸ ದಿಕ್ಕನ್ನು ಕಲ್ಪಿಸುವ ಕುರಿತು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ISF) ಬುಧವಾರ ಘೋಷಿಸಿದೆ. ವೃತ್ತಿಯ ಮಧ್ಯಭಾಗದಲ್ಲಿ ಇರುವವರನ್ನು ಗುರುತಿಸಿ ಅವರನ್ನು ಗೌರವಿಸುವ ಬದಲು ಇನ್ನು ಮುಂದೆ ಈ ಪ್ರಶಸ್ತಿಯು ವೃತ್ತಿಯ ಆರಂಭದ ಹಂತಗಳಲ್ಲಿ ಇರುವವರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಸಾಧನೆ ಮಾಡಬಲ್ಲರು ಎನ್ನುವವರನ್ನು ಗೌರವಿಸುವ ಹಾಗೂ ಸಾಮರ್ಥ್ಯ ಇರುವವರನ್ನು ಗೌರವಿಸುವ ಗುರಿ ಹೊಂದಲಾಗಿದೆ. ದೀರ್ಘಾವಧಿಯ ಧನಾತ್ಮಕ ಪರಿವರ್ತನೆಗಳನ್ನು ಕಾಣುವ ಉದ್ದೇಶದಿಂದ ಪ್ರಶಸ್ತಿಗೆ ಆಯ್ಕೆಯಾಗುವವರ ಗರಿಷ್ಠ ವಯೋಮಿತಿಯನ್ನು 40 ವರ್ಷಕ್ಕೆ ಪರಿಷ್ಕರಿಸಲಾಗುತ್ತಿದೆ ಎಂದರು.

ಮಾನವ ಕುಲಕ್ಕೆ ಪ್ರಯೋಜನ ತಂದುಕೊಡುವ ಅತ್ಯುತ್ತಮ ಸಂಶೋಧನೆಗಳನ್ನು ಗುರುತಿಸುವುದು ಮತ್ತು ಯುವ ಸಂಶೋಧಕರಿಗೆ, ವಿಜ್ಞಾನಿಗಳಾಗುವ ಬಯಕೆ ಹೊಂದಿರುವವರಿಗೆ ಮಾದರಿ ವ್ಯಕ್ತಿಗಳನ್ನು ಸೃಷ್ಟಿಸಿಕೊಡುವ ಇನ್ಫೋಸಿಸ್ ಪ್ರಶಸ್ತಿಯ ಮೂಲಭೂತ ಗುರಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ.

Latest Indian news

Popular Stories