ಬೆಂಗಳೂರು: ಗಿರವಿ ಇಟ್ಟಿದ್ದ ಆಭರಣಗಳ ಜೊತೆಗೆ ಸೇಟು ಪರಾರಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.
ಗಿರವಿ ಅಂಗಡಿ ಮುಚ್ಚಿ ರಾಜಸ್ಥಾನ ಮುನಾರಾಮ್ ಸೇಟು ಪರಾರಿಯಾಗಿದ್ದಾನೆ. ಆನಂದ್ ಜುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್ ಮಾಲೀಕ ಮುನಾರಾಮ್ 10 ವರ್ಷದಿಂದ ಗಿರವಿ ಅಂಗಡಿ ನಡೆಸುತ್ತಿದ್ದ.
ಅಂಗಡಿಯಲ್ಲಿ ಚಿನ್ನಾಭರಣ ಅಡವಿಟ್ಟು ಜನ ಹಣ ಪಡೆದುಕೊಂಡಿದ್ದರು.
ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಸೇಟು ಎಸ್ಕೇಪ್ ಆಗಿದ್ದಾನೆ. ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದು, ನೂರಾರು ಜನರಿಗೆ ವಂಚಿಸಿದ್ದಾನೆ. ಠಾಣೆಗೆ ದೂರು ನೀಡಲು ವಂಚನೆಗೊಳಗಾದ ನೂರಾರು ಗ್ರಾಹಕರು ಸೂರ್ಯ ನಗರ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡಿದ್ದಾರೆ