ದರ್ಶನ್ ಇರೋ ಠಾಣೆ ಎದುರು ಶಾಮಿಯಾನ; ಮದ್ವೆ ಊಟ ಇದ್ಯಾ? ಅಂತ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy) ಆರೋಪಿಗಳಾದ ನಟ ದರ್ಶನ್ (Actor Darshan) ಹಾಗೂ ಸಹಚರರಿಗೆ ಮೇಲಿಂದ ಮೇಲೆ ಪೊಲೀಸರು ಡ್ರಿಲ್ ಮಾಡುತ್ತಿದ್ದಾರೆ. ನಿನ್ನೆ ಇಡೀ ದಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ (Annapurneshwari nagar police station) ಸುತ್ತಲೂ ಶಾಮಿಯಾನ ಹಾಕಿ ವಿಚಾರಣೆ ನಡೆಸಿದ್ದಾರೆ.

ಅಲ್ಲದೆ ಠಾಣೆ ಸುತ್ತಲೂ ಸಾರ್ವಜನಿಕರಿಗೆ ಎಂಟ್ರಿ ಇಲ್ಲದ ರೀತಿಯಲ್ಲಿ ಠಾಣೆಯ ಗೇಟ್ ಬಂದ್ ಮಾಡಲಾಗಿದೆ. ಅಷ್ಟೇ ಅಲ್ಲ 144 ಸೆಕ್ಷನ್ (144 Section) ಹಾಕಿರೋ ಪೊಲೀಸರು ರಸ್ತೆ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.

ಎರಡು ಬದಿ ಬ್ಯಾರಿಕೇಡ್ ಹಾಕಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡೋದಕ್ಕೂ ಆಗ್ತಿಲ್ಲ. ಇದರಿಂದ ಸಿಟ್ಟಿಗೆದ್ದಿರುವ ಜನ, ಕೊಲೆ ಕೇಸ್​​ ನಲ್ಲಿ ದರ್ಶನ್ ಬಂಧನ ಆಗಿರೋದು. ಅವರ ವಿರುದ್ದ ಕ್ರಮ ಆಗಲಿ, ಅದನ್ನ ಬಿಟ್ಟು ನಮಗ್ಯಾಕೆ ಈ ರೀತಿ ತೊಂದರೆ ಕೊಡ್ತೀರ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ನಾವು ಕೆಲಸಕ್ಕೆ ಹೋಗಬೇಕು, ಇದೇ ರಸ್ತೆಯಲ್ಲಿ ಹೋಗಬೇಕು. ಅವರ್ಯಾರೋ ಕೊಲೆ ಆರೋಪಿಗಳನ್ನು ವಿಚಾರಣೆ ಮಾಡಿದರೆ ಮಾಡಲಿ. ಅದಕ್ಕೆ ನಮಗೆ ಯಾಕೆ ತೊಂದರೆ ಕೊಡ್ತಾ ಇದ್ದಾರೆ. ಪೊಲೀಸರು ಅವರ ಕೆಲಸ ಅವರು ಮಾಡಲಿ, ಹೀಗೆ ರೋಡ್ ಗೆ ಬ್ಯಾರಿಗೇಟ್ ಹಾಕಿ ನಮಗೆ ಯಾಕೆ ತೊಂದರೆ, ಇಲ್ಲೇ ಮನೆ ಬಿಡಿ ಅಂದರು ಪೊಲೀಸರು ಬಿಡ್ತಾ ಇಲ್ಲ. ನಾವೇನು ಮಾಡಬೇಕು, ಹೇಗೆ ಮನೆಗೆ ಹೋಗಬೇಕು. ಶಾಲಾ ವಾಹನಗಳು ಬರುತ್ತೆ, ಮಕ್ಕಳಿಗೆ ಶಾಲೆಗೆ ತಡವಾಗುತ್ತೆ. ನಮಗೆ ಆಫೀಸಿಗೆ ತಡವಾಗುತ್ತೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

Latest Indian news

Popular Stories