ಬೆಂಗಳೂರಿನಲ್ಲಿ ಒಂದೇ ದಿನ ಮೂರು ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು , ಮಾರ್ಚ್ 04: ನೈಋತ್ಯ ರೈಲ್ವೆ ವಲಯದಲ್ಲಿ ಹಾದು ಹೋಗುತ್ತಿದ್ದ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ಮಾರ್ಚ್ 3ರ ಭಾನುವಾರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದಿದ್ದರೂ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.”ದುರದೃಷ್ಟವಶಾತ್, ಒಂದೇ ದಿನದಲ್ಲಿ ಮೂರು ಘಟನೆಗಳು ನಡೆದಿವೆ.

ನಮ್ಮ ಪೊಲೀಸರು ವಿವಿಧ ಸ್ಥಳಗಳಿಗೆ ಧಾವಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಬಂಧನವಾಗಿಲ್ಲ” ಎಂದು ಇನ್‌ಸ್ಪೆಕ್ಟರ್ ಜನರಲ್ ಕಮ್ ಪ್ರಿನ್ಸಿಪಲ್ ಚೀಫ್ ಸೆಕ್ಯುರಿಟಿ ಕಮಿಷನರ್, ರೈಲ್ವೇ ಪ್ರೊಟೆಕ್ಷನ್ ಫೋರ್ಸ್, ಎಸ್‌ಡಬ್ಲ್ಯೂಆರ್, ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

ಕಲ್ಲು ತೂರಾಟ ವರದಿಯಾಗಿರುವ ಮೂರು ಘಟನೆಗಳಲ್ಲಿ ಎರಡು ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಸಂಭವಿಸಿವೆ. ಮಾರ್ಚ್ 3ರ ಬೆಳಗ್ಗೆ 6.15ಕ್ಕೆ ಕೆಎಸ್‌ಆರ್ ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20661) ಬೆಂಗಳೂರು ರೈಲ್ವೆ ವಿಭಾಗದ ಚಿಕ್ಕಬಾಣಾವರ ರೈಲು ನಿಲ್ದಾಣವನ್ನು ದಾಟಿದಾಗ ಮೊದಲ ಘಟನೆ ನಡೆದಿದೆ.

ಕೋಚ್ C6ರ 40, 41 ಮತ್ತು 42 ಸೀಟ್‌ಗಳಲ್ಲಿರುವ ಕಿಟಕಿಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದ್ದಾರೆ.7th pay commission: ಬಜೆಟ್ ಅಲ್ಲೂ ಇಲ್ಲ, ಸಮ್ಮೇಳನದಲ್ಲೂ ಇಲ್ಲ, ನೌಕರರಿಗೆ ಮತ್ತೆ ಸಿಕ್ಕಿದ್ದು ಭರವಸೆ ಮಾತ್ರ!ಎರಡನೇ ಘಟನೆ ಮಧ್ಯಾಹ್ನ 3.20 ರ ಸುಮಾರಿಗೆ ಧಾರವಾಡ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20662) ಹಿಂತಿರುಗುವ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದೆ.

ಮೈಸೂರು ವಿಭಾಗದ ಹಾವೇರಿ ಮತ್ತು ಹರಿಹರ ರೈಲು ನಿಲ್ದಾಣದ ಸಿ5 ಕೋಚ್‌ನ ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ.ಮೂರನೇ ಘಟನೆ ಮೈಸೂರು-ಎಂಜಿಆರ್ ಸೆಂಟ್ರಲ್ ವಂದೇ ಭಾರತ್ ರೈಲಿನಲ್ಲಿ ಬೆಂಗಳೂರು ವಿಭಾಗದ ಕುಪ್ಪಂ ನಿಲ್ದಾಣಕ್ಕೆ 200 ಮೀಟರ್ ದೂರದಲ್ಲಿರುವಾಗ ಸಂಜೆ 4.30 ಕ್ಕೆ ಸಂಭವಿಸಿದೆ

Latest Indian news

Popular Stories