ಹಿಂದೂ ಧರ್ಮದ ಕುರಿತು ಶಿಕ್ಷಕಿ ಅವಹೇಳನಕಾರಿ ಹೇಳಿಕೆ ಕೇಸ್ : ಮಂಗಳೂರಲ್ಲಿ ಸರ್ಕಾರದ ವಿರುದ್ಧ VHP ಪ್ರತಿಭಟನೆ

ಬೆಂಗಳೂರು: ಮಂಗಳೂರಿನ ಜೇರುಸಾ ಶಾಲೆಯಲ್ಲಿ ಇತ್ತೀಚಿಗೆ ಶಿಕ್ಷಕಿಯೊಬ್ಬರು ಹಿಂದೂ ಧರ್ಮದ ಕುರಿತಂತೆ ಅವಹೇಳನ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನ ಮಿನಿ ವಿಧಾನಸೌಧದ ಆವರಣದಲ್ಲಿ ವಿ ಎಚ್ ಪಿ ಕಾರ್ಯಕರ್ತರು ಸರ್ಕಾರದವರು ಪ್ರತಿಭಟನೆ ನಡೆಸಿದರು.

ಶಿಕ್ಷಕಿಯಿಂದ ಹಿಂದೂ ಧರ್ಮಕ್ಕೆ ಅವಹೇಳನ ಪ್ರಕರಣಕ್ಕೆ ಸಂಬಂಧಸಿದಂತೆ ಹಾಗೂ ಬಿಜೆಪಿ ಶಾಸಕರು ಹಿಂದೂ ನಾಯಕರ ವಿರುದ್ಧ ದಾಖಲಾಗಿರುವ FIR ಹಿನ್ನೆಲೆಯಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ವಿ ಎಚ್ ಪಿ ಧರಣಿ ನಡೆಸುತ್ತಿದೆ. ಜೇರುಸಾ ಶಾಲೆ ಶಿಕ್ಷಕಿ ಸಿಸ್ಟರ್ ಪ್ರಭ ಬಂಧಿಸುವಂತೆ ವಿ ಎಚ್ ಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಈ ವೇಳೆ ಜೈ ಶ್ರೀ ರಾಮ್ ಘೋಷಣೆ ಕೂಗಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮಿನಿ ವಿಧಾನ ಸೌಧದ ಎದುರುಗಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ನಾವು ಪೊಲೀಸರು ತಡೆಹಿಡಿದರು.

Latest Indian news

Popular Stories