ಕೋವಿಡ್ ಹೆಚ್ಚಲು ಸರಕಾರವೇ ಕಾರಣ

ಕೊಪ್ಪಳ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಲು ರಾಜ್ಯ ಸರಕಾರದ ನಿರ್ಲಕ್ಷö್ಯವೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ಕಾಣಿಸಿಕೊಳ್ಳಲು ಮತ್ತು ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹರಡಲು ಸಹ ಸರಕಾರವೇ ಕಾರಣವಾಗಿದೆ ಎಂದು ದೂರಿದರು.
ಕೋವಿಡ್ ಹರಡುತ್ತಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರಕಾರಕ್ಕೆ ಭ್ರಷ್ಟಾಚಾರವೇ ಮುಖ್ಯವಾಗಿತ್ತು. ದುಡ್ಡು ಹೊಡೆಯುವುದರಲ್ಲಿಯೇ ಸರಕಾರ ಮಗ್ನವಾಗಿದ್ದು, ಕಾಲಹರಣ ಮಾಡುತ್ತಿದೆ. ಸರಕಾರ ಬಿಗಿ ಕ್ರಮ ಕೈಗೊಳ್ಳದಿರುವುದೇ ಕೋವಿಡ್ ಹರಡಲು ಕಾರಣವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಕೇರಳ, ಮಹಾರಾಷ್ಟçದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು.

Latest Indian news

Popular Stories