ಈಜಲು ತೆರಳಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ರಾಮನಗರ: ಈಜಲು ತೆರಳಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ರಾಮನಗರದ ಅಚಲು ಗ್ರಾಮದ ಬೆಟ್ಟದ ಸಮೀಪದಲ್ಲಿ ಸಂಭವಿಸಿದೆ.

ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರನ್ನು ಸಬಾದ್ (14), ಸುಲ್ತಾನ್ (13), ರಿಯಾಜ್ ಖಾನ್ (15) ಎಂದು ಗುರುತಿಸಲಾಗಿದ್ದು, ಮೂವರು ಕೂಡ ರಾಮನಗರದ ಮೆಹಬೂಬ್ ನಗರದ ನಿವಾಸಿಗಳು ಎಂದು ಹೇಳಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ 8 ಮಂದಿ ಸಹಪಾಟಿಗಳೊಂದಿಗೆ ಅಚ್ಚಲು ಗ್ರಾಮದ ಬಳಿಯ ಬೆಟ್ಟದ ನದಿಯಲ್ಲಿ ಈಜಲು ಬಂದಿದ್ದರು ಎನ್ನಲಾಗಿದೆ.

ಈ ಬೆಟ್ಟದಲ್ಲಿ ಸುಮಾರು 10 ಅಡಿ ಆಳದ ನೀರಿನ ಹೊಂಡವಿದ್ದು, ಇದರಲ್ಲಿ ಮೂವರು ವಿದ್ಯಾರ್ಥಿಗಳು ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಈಜು ಬಾರದೆ ಮೂವರು ಸಹ ಸಾವಿಗೆ ಶರಣಾಗಿದ್ದಾರೆ. ಮೃತರ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳು ಮೇಲಕ್ಕೆ ಎತ್ತಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Latest Indian news

Popular Stories