ಕರ್ನಾಟಕ ಚುನಾವಣೆ: ಇಂದು ಬಿಜೆಪಿ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಆಗಮನ

ಬೀದರ್​​: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತಯಾಚನೆಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ಚಗರು ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ.

ಇಂದು ಮುಂಜಾನೆ 8:20ಕ್ಕೆ ಸೇನಾ ವಿಮಾನದ ಮೂಲಕ ದೆಹಲಿಯಿಂದ ಹೊರಟು, ಮುಂಜಾನೆ 10:20ಕ್ಕೆ ಬೀದರ್ ಏರ್ ಬೇಸ್ ಗೆ ಆಗಮಿಸಲಿದ್ದಾರೆ. ಬೀದರ್ ಏರ್ ಬೇಸ್​ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಪಟ್ಟಣಕ್ಕೆ ಬರುತ್ತಾರೆ. ಪಟಣ್ಣದ ಚೀನಕೇರಾ ಕ್ರಾಸ್ ಬಳಿ ಆಯೋಜಿಸಲಾಗಿರುವ ಬೃಹತ್​ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.

Latest Indian news

Popular Stories