ಕಲ್ಯಾಣ ಕರ್ನಾಟಕ ಎಜ್ಯುಕೇಶನ್ ಐಕಾನ್-2023 ಪ್ರಶಸ್ತಿಗೆ ಶಿಕ್ಷಕ ಶಿವಲಿಂಗ ಹೇಡೆ ಆಯ್ಕೆ

ಬೀದರ್: ಶ್ರೀ ನಾನಕ್ ಝೀರಾ ಸಾಹಿಬ್ ಫೌಂಡೇಶನ್ (SNJSF) ಟ್ರಸ್ಟ್ ಸ್ಥಾಪಿಸಿರುವ ‘ಕಲ್ಯಾಣ ಕರ್ನಾಟಕ ಟೀಚರ್ಸ್ ಎಜ್ಯುಕೇಶನ್ ಐಕಾನ್ ಅವಾರ್ಡ್ – 2023’ ಪ್ರಶಸ್ತಿಗೆ ಸಂತಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶಿವಲಿಂಗ ಹೇಡೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯು ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ತಜ್ಞರ ಗಮನಾರ್ಹ ಸಾಧನೆ ಪ್ರಯತ್ನಗಳನ್ನು ಗುರುತಿಸಿ ನೀಡಲಾಗುತ್ತದೆ. ಶಿಕ್ಷಣ ಮತ್ತು ಸಮಾಜಕ್ಕೆ ಗಮನಾರ್ಹ ಕೊಡುಗೆಗಳ ಜೊತೆಗೆ ಬೋಧನೆ, ಸಂಶೋಧನೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿಸುವ ಅಸಾಧಾರಣ ಅಧ್ಯಾಪಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ.ಬಲಬೀರ್ ಸಿಂಗ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೋ. ಜ್ಯೋತಿ ಐನಾಪೂರ ಅವರು ತಿಳಿಸಿದ್ದಾರೆ. ಬೀದರಿನ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಸೆಪ್ಟೆಂಬರ್ 5, 2023 ಶಿಕ್ಷಕರ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Latest Indian news

Popular Stories