ಕಲ್ಯಾಣ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಆಯೋಜಿಸಿರುವ ಜಾಂಬೊರೇಟ್ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಇಂದು ಬೀದರ್ ನಗರದ ಶಾಹೀನ್ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಿತು. ವಿಭಾಗೀಯ ಆಯುಕ್ತರಾದ ಶ್ರೀ ಸಿ. ಬಿ. ಪಾಟೀಲ್ ಓಕಳಿಯವರು ಕಾರ್ಯಕ್ರಮದ ತಯಾರಿಯ ಸಂಪೂರ್ಣ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಿದರು. ಕಲ್ಯಾಣ ಕರ್ನಾಟಕ ಜಾಂಬೊರೇಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಶರಣ್ ಪ್ರಕಾಶ್ ಪಾಟೀಲ್, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ರಹೀಮ್ ಖಾನ್, ಶ್ರೀ ಬೋಸರಾಜು ಮತ್ತಿತರರು ಆಗಮಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 3 ಸಾವಿರಕ್ಕೂ ಹೆಚ್ಚು ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯಸ್ಥರು ಜಾಂಬೊರೇಟ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಜಾಂಬೊರೇಟ್‍ನಲ್ಲಿ ನಡೆಯಲಿರುವ ಯೋಗ, ಧ್ಯಾನ, ಜಾಥಾ, ಪಥ ಸಂಚಲನ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜಿಲ್ಲೆಯ ಜಾತ್ರೆಗಳ ಸನ್ನಿವೇಶ ಪ್ರದರ್ಶನ, ಜಿಲ್ಲಾ ವೈಭವ, ದೈಹಿಕ ಶಿಕ್ಷಣದ ಪ್ರದರ್ಶನ, ಲೋಕಲ್ ಟ್ಯಾಲೆಂಟ್ ಶೋ,
ಮೆಹಂದಿ, ರಂಗೋಲಿ, ಪೇಪರ್ ಕಟ್ಟಿಂಗ್, ಕ್ಲೆಮಾಡಲಿಂಗ್, ಪಯೋನಿರಿಂಗ್ ಮಾಡೆಲ್ಸ್, ಬೆಂಕಿ ಇಲ್ಲದೇ ಅಡುಗೆ ತಯಾರಿಕೆ, ತರಕಾರಿ ಮಾದರಿ, ರಸಪ್ರಶ್ನೆ ಸ್ಪರ್ಧೆ, ಸೋಲಾರ್ ತಂತ್ರಜ್ಞಾನ, ಅಗ್ನಿ ಸುರಕ್ಷತಾ ಕ್ರಮಗಳ ಮಾಹಿತಿ, ಬಿದರಿ, ಕಲೆ, ಸಿ.ಪಿ.ಆರ್, ಸುಸ್ಥಿರ ಅಭಿವೃದ್ಧಿಗಳ ತರಬೇತಿ, ಕಲರ್ ಪಾರ್ಟಿ, ಜಾನಪದ ನೃತ್ಯ, ದೇಶಭಕ್ತಿ ನೃತ್ಯ, ಎರೋಬಿಕ್ ಡ್ಯಾನ್ಸ್, ಸರ್ವಧರ್ಮ ಪ್ರಾರ್ಥನೆಯ ಸಿದ್ದತೆಯ ಬಗ್ಗೆ ಪರಾಮರ್ಶೆ ನಡೆಯಿತು.
ಸಭೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತರಾದ ಶ್ರೀಮತಿ ಡಾ. ಗುರಮ್ಮಾ ಸಿದ್ಧಾರೆಡ್ಡಿ, ಕಾರ್ಯದರ್ಶಿಯಾದ ಡಾ. ಭರಶೆಟ್ಟಿ, ಶ್ರೀ ರಮೇಶ್ ತಿಬ್ಬಶೆಟ್ಟಿ , ಶ್ರೀ ರಾಚಯ್ಯ ನಾಸಿ, ಶ್ರೀಮತಿ ನಾಗರತ್ನ ಪಾಟೀಲ್, ಶ್ರೀಮತಿ ಜಯಶೀಲಾ ಸುದರ್ಶನ್ ಮತ್ತು ಜಿಲ್ಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯಕರ್ತರು ಹಾಜರಿದ್ದರು.