ಖಂಡ್ರೆಗೆ ಔರಾದನಲ್ಲಿ ಭರ್ಜರಿ ಸ್ವಾಗತ | ಪ್ರಭು ಚವ್ಹಾಣ ಹಟಾವೋ ಔರದ ಬಚಾವೋ – ಸುಳ್ಳು ಬಿಜೆಪಿಯ ಮನೆ ದೇವರು : ಈಶ್ವರ ಖಂಡ್ರೆ



ಔರಾದ: ಪಟ್ಟಣದ ಗಣೇಶ ಮಾಲ್ ನಲ್ಲಿ ನೂತನ ಕಾಂಗ್ರೆಸ್ ಕಮಿಟಿಯ ಕಚೇರಿ ಉದ್ಘಾಟನೆ ಮತ್ತು ಸಿದ್ದರಾಮಯ್ಯನವರ ಜಿಲ್ಲಾ ಪ್ರವಾಸದ ಹಿನ್ನಲೆ ಪೂರ್ವಭಾವಿ ಸಭೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿ ಶಾಸಕರಾಗಿರುವ ಈಶ್ವರ ಖಂಡ್ರೆಯವರು ಅಗಮಿಸಿದ್ದು, ಪಟ್ಟಣದ ಪ್ರವಾಸಿ ಮಂದಿರದಿಂದ ಗಣೇಶ ಮಾಲ್ ವರೆಗೆ ತೆರೆದ ವಾಹನದಲ್ಲಿ ಬೈಕ್ ರ್ಯಾಲಿ ಮುಖಾಂತರ ಕೈ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದರು,.


ಪಕ್ಷದ ಕಚೇರಿಯ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ ಖಂಡ್ರೆ ನೆರೆವೇರಿಸಿದ್ದರು, ನಂತರ ಪಕ್ಷದ ವತಿಯಿಂದ ಅಯೋಜಿಸಿದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮಾತಾನಾಡಿ ದೇಶದಲ್ಲಿ ಇಂದು ಭ್ರಷ್ಟಚಾರ ತಾಂಡವವಾಡುತ್ತಿದೆ,


ದಿನಸಿ ಪದಾರ್ಥಗಳ ಬೆಲೆ ಗಗನಕ್ಕೆರುತ್ತಿದೆ,ಇಂತಹ ಪರಿಸ್ಥಿತಿಯಲ್ಲಿ ಬಡವರು ಜೀವನ ನಡೆಸುವುದು ಕಷ್ಟವಾಗುತ್ತಿದೆ , ತಾಲ್ಲೂಕಿನಲ್ಲಿಯೂ ಕೂಡ ಇದೇ ಪರಿಸ್ಥಿತಿಯಿದ್ದು ಪ್ರಭು ಚವ್ಹಾಣ ಹಟಾವೋ ಔರದ ಬಚಾವೋ ಎಂದು ಕಿಡಿಕಾರಿದರು.


ನಂತರ ಮಾತಾನಾಡಿದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಸಚಿವ ಪ್ರಭು ಚವ್ಹಾಣ ವಿರುದ್ದ ಮಾತಿನ ಪ್ರಹಾರ ನಡೆಸಿದ್ದರು,ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಮತ್ತು ಪ್ರಭು ಚವ್ಹಾಣರನ್ನು ಬಾಂಬೆಗೆ ಕಳುಹಿಸಬೇಕೆಂದರು.


ಸುಳ್ಳು ಬಿಜೆಪಿಯ ಮನೆ ದೇವರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಖಂಡ್ರೆ ಮಾತಾನಾಡಿ ಡಬಲ್ ಇಂಜಿನ್ ಸರಕಾರ ,40% ಸರಕಾರ, ಈ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ,ಗ್ರಾಮ ಪಂಚಾಯತ್ ನಿಂದ ಹಿಡಿದು ಎಲ್ಲಾ ಇಲಾಖೆಯಲ್ಲಿ ಲಂಚವಿಲ್ಲದೇ ಕೆಲಸ ನಡೆಯುತ್ತಿಲ್ಲ ,ಕಲ್ಯಾಣ ಕರ್ನಾಟಕಕ್ಕೆ ಕಡೆಗಣನೆ ಮಾಡುತ್ತಿದೆ, ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ,ಪೆಟ್ರೋಲ್/ಡಿಸೇಲ್ ಬೆಲೆ ಇಳಿಕೆ, ಹೀಗೆ ಹಲವು ಸುಳ್ಳುಗಳನ್ನು ಬಿಜೆಪಿ ಸರಕಾರ ಹೇಳಿತ್ತು ,ಸುಳ್ಳು ಬಿಜೆಪಿಯ ಮನೆ ದೇವರು,ಅದರೆ ಕಾಂಗ್ರೆಸ್ ಪಕ್ಷ ಮಾತ್ರ ನುಡಿದಂತೆ ನಡೆಯುತ್ತೆ ನಮ್ಮ ಸರಕಾರ ಅಡಳಿತ ಬಂದ ನಂತರ ರಾಜ್ಯದ ಪ್ರತಿ ಮನೆ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ತಿಂಗಳಿಗೆ 2000 ರೂಪಾಯಿ ಮತ್ತು ಬಿಪಿಎಲ್ ಕಾರ್ಡು ದಾರರಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರು,


ಚವ್ಹಾಣ ವಿರುದ್ದ ಮೌನ ಮುರಿಯದ ಖಂಡ್ರೆ
ಈಶ್ವರ ಖಂಡ್ರೆ ಬಿಜೆಪಿ ಸರಕಾರದ ವಿರುದ್ದ ಮಾತಿನ ಪ್ರಹಾರ ನಡೆಸಿದ್ದರು,ಅದರೆ ಚವ್ಹಾಣ ವಿರುದ್ದ ಮಾತ್ರ ಸ್ಪಷ್ಟವಾಗಿ ಮೌನ ಮುರಿದಿಲ್ಲ,ನೆಪ ಮಾತ್ರಕ್ಕೆ ಭಾಷಣದ ಕೊನೆಯಲ್ಲಿ ಚವ್ಹಾಣ ಹೆಸರು ನೆನೆದ ಹಾಗೆ ಇತ್ತು, ಯಾಕೆ ಖಂಡ್ರೆ ಚವ್ಹಾಣ ಪರವಾಗಿ ಮೃದು ಧೋರಣೆ ತೋರಿದ್ದಾರೆ? ಎಂಬುವುದು ತಾಲ್ಲೂಕಿನಲ್ಲಿ ಚರ್ಚೆಗೆ ಕಾರಣವಾಗಿದೆ

ಜೆಸಿಬಿ ಮೂಲಕ ಹೂವು ಸುರಿದ ಅಭಿಮಾನಿಗಳು
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ,ಅಭಿಮಾನಿಗಳು,ಟಿಕೆಟ್ ಅಕ್ಷಾಂಶಿಗಳು ಈಶ್ವರ ಖಂಡ್ರೆಯವರಿಗೆ ಜೆಸಿಬಿ ಮೂಲಕ ಹೂವು ಸುರಿದಿದ್ದು,ಖಂಡ್ರೆಯವರಿಗೆ ಅದ್ದೂರಿಯಾಗಿ ಸ್ವಾಗತಿಸಿದ್ದರು.


2 ಡಜನ್ ಗೂ ಅಧಿಕ ಟಿಕೆಟ್ ಅಕ್ಷಾಂಶಿಗಳು
ಗಡಿ ತಾಲ್ಲೂಕಿನಲ್ಲಿ ಕಳೆದ ಮೂರು ಅವಧಿಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದು,ಈ ಬಾರಿಯು ಕೂಡ ತಯಾರಿ ನಡೆಸುತ್ತಿದೆ,ಅದರೆ ರಾಜಕೀಯ ನಿಂತ ನೀರಲ್ಲ ಜನರು ಬದಲಾವಣೆ ಬಯಸುತ್ತಿದ್ದಾರೆ,ಅದಕಾರಣ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜನ ಕೈಹಿಡಿಯುತ್ತಿದ್ದಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿದೆ,ಅದರೆ ಪಕ್ಷದಲ್ಲಿ 2 ಡಜನ್ ಗೂ ಅಧಿಕ ಟಿಕೆಟ್ ಅಕ್ಷಾಂಶಿಗಳು ಇದ್ದು ಪಕ್ಷದ ವರಿಷ್ಠರ ತಲೆನೋವಿಗೆ ಕಾರಣವಾಗಿದೆ,

ಟಿಕೆಟ್ ಅಕ್ಷಾಂಶಿಗಳಲ್ಲಿ ಮುನಿಸು
ಕಳೆದ ಬಾರಿ ಔರಾದ ನಲ್ಲಿ ಕಾಂಗ್ರೆಸ್ ಪಕ್ಷ ಗೆಲುವ ನೀರಿಕ್ಷೆ ಇತ್ತು,ಅದರೆ ಪಕ್ಷದ ಒಳ ಮುನಿಸಿನ ಕಾರಣ ಸುಮಾರು ಹತ್ತು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿತ್ತು,ಅದರೆ ಕಳೆದ ಬಾರಿ ಹೊಲಿಸಿದ್ದರೆ ಈ ಬಾರಿ ಟಿಕೆಟ್ ಅಕ್ಷಾಂಶಿಗಳ ಸಂಖ್ಯೆ ಹೆಚ್ಚಾಗಿದ್ದು , ಒಳ ಮುನಿಸು ಕಡೆ ಅಷ್ಟೇ ಹೆಚ್ಚಾಗಿದೆ,
ಸಂಭ್ಯಾವ ಪಟ್ಟಿ
ಈ ಬಾರಿ ಕ್ಷೇತ್ರದಲ್ಲಿ ಲೋಕಲ್ ನಾನ್ ಲೋಕಲ್ ಫೈಟ್ ಜೋರಾಗಿ ನಡೆದಿದ್ದು,ಪ್ರಬಲವಾಗಿ ಡಾ,ಲಕ್ಷ್ಮಣ ಸೋರಳ್ಳಿಕರ್ ,ವಿಶ್ವನಾಥ ದೀನೆ,ಭೀಮಸೇನ್ ರಾವ ಸಿಂಧೆ ಹೆಸರು ಮುಂಚೂಣಿಯಲ್ಲಿದೆ,
ಈ ಕಾರ್ಯಕ್ರಮದಲ್ಲಿ ಶಾಸಕರಾದ ರಹೀಮ್ ಖಾನ್ ,ವಿಧಾನ ಪರಿಷತ್ ಸದಸ್ಯ ಅರವಿಂದ್ ಕುಮಾರ ಅರಳಿ,ಭೀಮರಾವ್ ಪಾಟೀಲ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ್,ಪ್ರಚಾರ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚೀಮಕೋಡೆ ,ಔರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಕುಮಾರ ಎಡವೆ,ಅನಂದ ಚವ್ಹಾಣ,ದತ್ತು ಬಾಪೂರೆ,ಚಂದು ಡಿಕೆ ,ಸೇರಿದಂತೆ ಅನೇಕರಿದ್ದರು,

Latest Indian news

Popular Stories