ಔರಾದ : ಪಟ್ಟಣದ ಅಮರೇಶ್ವರ ಕಾಲೇಜು ಆವರಣದಲ್ಲಿ ಇಂದು ಸಾಯಂಕಾಲ ಏಕತಾ ಫೌಂಡೇಶನ್ ಅಧ್ಯಕ್ಷರಾದ ರವೀಂದ್ರ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಏಕತಾ ಉತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು,
ಕಾರ್ಯಕ್ರಮದ ಪ್ರಾರಂಭದಲ್ಲಿ ನೀಲಕಂಠ ಪರಶಿವನ ಹಾಡಿನ ಶ್ರೀ ಉದ್ಭವ ಲಿಂಗ ಅಮರೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,
ಹಳ್ಳಿಗಳಿಂದ ಹರಿದು ಬರುತ್ತಿರುವ ಜನಸಾಗರ
ಪಟ್ಟಣದಲ್ಲಿ ನಡೆಯುತ್ತಿರುವ ಏಕತಾ ಉತ್ಸವಕ್ಕೆ ಕಮಲನಗರ ಮತ್ತು ಔರಾದ ತಾಲ್ಲೂಕಿನ ಹಲವು ಹಳ್ಳಿಗಳಿಂದ ಜನಸಾಗರವೇ ಹರಿದು ಬರುತ್ತಿದೆ,ಸುಮಾರು 8000 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಂಡೆಪ್ಪ ಕಂಟೆ ,ಸಂಜು ಕುಮಾರ ಜುಮ್ಮಾ,ಗುಂಡಯ್ಯ ಸ್ವಾಮಿ,ಸುನಿಲ್ ಕುಮಾರ ದೇಶಮುಖ್,ದೀಪಕ್ ಪಾಟೀಲ್ ಚಾದೊರಿ,ರಾಜಕುಮಾರ ಹೆಬ್ಬಾಳೆ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು